ಹದಿನಾರನೆಯ ಸಂಚಿಕೆ

ನನ್ನ ಮಾತು:
ಈ ಸಂಚಿಕೆಯಲ್ಲಿ ಮಧ್ಯಮ ವಯಸ್ಸಿನ ವಿವಾಹಿತ ಮಹಿಳೆಯ ಬಗ್ಗೆ ಬರೆಯುತ್ತಿದ್ದೇನೆ. ಈಕೆಯ ಸಮಸ್ಯೆಗಳು ಬಾಹ್ಯ ರೂಪದಲ್ಲಿ ಕಂಡುಬಂದ ಲಕ್ಷಣಗಳೇ ಬೇರೆಯಾಗಿದ್ದು ಆಂತರ್ಯದಲ್ಲಿ ಹುದುಗಿದ್ದ ಸಮಸ್ಯೆಗಳೇ ಬೇರೆಯಾಗಿದ್ದ ಕಾರಣ ಈಕೆ ನಾನಾ ಕಷ್ಟ-ಕೋಟಲೆಗಳನ್ನು ಅನುಭವಿಸುವಂತಾದುದು ವಿಪರ್ಯಾಸವಲ್ಲವೇ? ಓದಿ, ಅರ್ಥೈಸಿ, ಬರೆಯಿರಿ.
ವೃತ್ತಿ ಧರ್ಮದಂತೆ ಇಲ್ಲಿ ವಿವರಿಸಿರುವ ರೋಗಿಗಳ ಪರಿಚಯವನ್ನು ಕೊಡಲಾಗುವುದಿಲ್ಲ.

ಬಾಹ್ಯ ಲಕ್ಷಣಗಳು :
ನಲವತ್ತು ವರ್ಷ ವಯೋಮಾನದ ವಿವಾಹಿತ ಎರಡು ಮಕ್ಕಳ ತಾಯಿ, ನೆಮ್ಮದಿಯ ಮಧ್ಯಮ ವರ್ಗದ ಕುಟುಂಬಸ್ತೆ.
ಜೀರ್ಣ ಕ್ರಿಯೆಯಲ್ಲಿ ತೊಂದರೆ, ಅನಿದ್ರೆ, ಜೀವನದಲ್ಲಿ ಉತ್ಸಾಹವಿಲ್ಲ, ಗೃಹಕೃತ್ಯದ ಯಾವುದೇ ಕೆಲಸ-ಕಾರ್ಯ ಮಾಡಲು ಆಸಕ್ತಿ ಇಲ್ಲ, ಕೂದಲು ವಿಪರೀತವಾಗಿ ಉದುರುತ್ತಿದೆ.

ರೋಗ ನಿದಾನ ಮೆಡಿಕಲ್ ಡೌಸಿಂಗ್‍ನಿಂದ ಹೊರಬಂದ ಅಂಶಗಳು :
1. ರೋಗದ ಮೂಲಸ್ಥಾನವು ಗಂಟಲು ಮತ್ತು ಹೊಟ್ಟೆಯಾಗಿವೆ.
2. ಪಂಚತತ್ವಗಳಲ್ಲಿ ಅಗ್ನಿ ಮತ್ತು ಜಲಗಳು, ಸಪ್ತಧಾತುಗಳಲ್ಲಿ ರಕ್ತ ಮತ್ತು ಅಸ್ತಿಗಳು, ತನ್ಮಾತ್ರೆಯಲ್ಲಿ ರಸವು ದುಷ್ಟಗೊಂಡಿದೆ.
3. ರೋಗವು ಭಾವನಾತ್ಮಕ {EMOTIONAL} ಮತ್ತು ಶಾರೀರಕ {PHYSICAL} ಸ್ತರದಲ್ಲಿದೆ.
4. ಸೂಕ್ಷ್ಮ ಶರೀರದ ವಿಶೇಷ ಗುಣಗಳಲ್ಲಿ {SUBTLE CHARACTERISTICS} ಮಾನಸಿಕ {MENTAL}, ಅಂತರಾತ್ಮ {SOUL} ಮತ್ತು ಙ್ಞಾನವಾಹಿನಿಗಳಲ್ಲಿ {SENSORIUM} ನ್ಯೂನತೆ ಕಾಣಿಸುತ್ತಿದೆ.
5. ಸ್ಥೂಲ ಶರೀರದ {PHYSICAL CHARACTERISTICS} ವಿಶೇಷ ಗುಣಗಳಲ್ಲಿ ನಮ್ಮಲ್ಲಿರುವ 72,000 ನರಮಂಡಲಗಳಲ್ಲಿ ನ್ಯೂನತೆಯಿದ್ದು ಅಸ್ತವ್ಯಸ್ತಗೊಂಡಿವೆ.
6. ಮಾನಸಿಕ {PSYCHOLOGICAL FACTORS} ನ್ಯೂನತೆಯ ಅಂಶಗಳನ್ನು ಗಮನಿಸಿದಾಗ ಆತಂಕ {ANXIETY}, ಇಚ್ಛೆಗಳು {DESIRE} ಪ್ರಧಾನವಾಗಿ ಕಾಣುತ್ತಿದ್ದು ತನ್ನ ಆರೋಗ್ಯದ ಮತ್ತು ಕುಟುಂಬದ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದು ತನ್ನ ವೈಯಕ್ತಿಕ ಜೀವನದ ಅವಿಭಾಜ್ಯ ಅಂಗವಾದ ಲೈಂಗಿಕತೆಯಲ್ಲಿ ಅನಾಸಕ್ತಿಯಿಂದ ಬಳಲುತ್ತಿದ್ದಾರೆ.
7. ಸೂಕ್ಷ್ಮ ಶರೀರದ {SUBTLE BODY} ಅವಿಭಾಜ್ಯ ಅಂಗವಾದ ಕುಂಡಲಿನಿ ಯೋಗದ ಎಲ್ಲ ಚಕ್ರಗಳು ಅಂದರೆ ಸಹಸ್ರಾರ, ಆಙ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾದಿಸ್ಥಾನ ಮತ್ತು ಮೂಲಾಧಾರ ಚಕ್ರಗಳೆಲ್ಲವೂ ತಮಗೆ ನಿಗದಿತವಾದುದಕ್ಕಿಂತಲೂ ಹೆಚ್ಚಿನ {OVER ACTIVE} ಕೆಲಸ ಮಾಡುತ್ತಾ ಒಂದಲ್ಲ ಒಂದು ರೂಪದಲ್ಲಿ ದೂಷಿತಗೊಂಡಿವೆ. ಇವುಗಳೊಂದಿಗೆ ಅನುಬಂಧ ಹೊಂದಿರುವ ಕಿರಣಗಳು {RAYS} ಸಹ ದೂಷಿತಗೊಂಡು ಮನಬಂದಂತೆ ಕೆಲಸ ಮಾಡುತ್ತಿವೆ. ಸೂಕ್ಷ್ಮ ಶರೀರದ ಅತ್ಯಂತ ಗಹನ ಭಾಗವಾದ ’ಮೆಂಟಲ್ ಬಾಡಿ’ {MENTAL BODY} ಮತ್ತು ’ಆಸ್ಟ್ರಲ್ ಬಾಡಿ’ {ASTRAL BODY} ಗಳು ಇಕ್ಕಟ್ಟಿನಲ್ಲಿ {CONGESTION} ಸಿಲುಕಿಕೊಂಡು ತಮ್ಮ ಕಾರ್ಯನಿರ್ವಹಣೆಯನ್ನು ಸೂಕ್ತವಾಗಿ ಮಾಡಲಾರದಾಗಿವೆ. ಅಂತೆಯೇ, ಮಾನಸಿಕ-ಭಾವನಾತ್ಮಕ {MENTAL-EMOTIONAL} ಮತ್ತು ಮಾನಸಿಕ-ಸ್ಥೂಲ ಶರೀರದಲ್ಲಿ {EMOTIONAL-PHYSICAL} ತಾಳ-ಮೇಳವಿಲ್ಲದಂತಾಗಿವೆ.

ವಿಶ್ಲೇಷಣೆ :
1. ರೋಗದ ಮೂಲಸ್ಥಾನವು ಗಂಟಲು ಮತ್ತು ಹೊಟ್ಟೆಯಾಗಿರುವುದನ್ನು ಗಮನಿಸಿದಾಗ ಪಂಚತತ್ವಗಳಲ್ಲಿ ಜಲ ಮತ್ತು ಅಗ್ನಿಗಳು ದುಷ್ಟವಾಗಿರುವುದನ್ನು ಸಮರ್ಥಿಸುತ್ತಿದೆ. ಅಂತೆಯೇ, ಸಪ್ತಧಾತುಗಳಲ್ಲಿ ರಕ್ತ ಮತ್ತು ಅಸ್ಥಿಗಳು ಸಮರ್ಥಿಸುತ್ತಿದೆ. ಇದರಿಂದಾಗಿಯೇ, ಈಕೆಯ ಜೀರ್ಣಕ್ರಿಯೆಯು ಅಸ್ತವ್ಯಸ್ತಗೊಂಡಿರುವುದನ್ನು ರಸತನ್ಮಾತ್ರೆಯು ಸಹ ಸಮರ್ಥಿಸುತ್ತಿದೆಯಾದ ಕಾರಣ ಇದನ್ನು ಪ್ರಮುಖವಾಗಿ ಗಮನಿಸಿ ಸರಿಪಡಿಸಬೇಕಾದುದು ಅತ್ಯಾವಶ್ಯಕವಾಗಿದೆ.
2. ಇವರ ರೋಗವು ಭಾವನಾತ್ಮಕ {EMOTIONAL} ಮತ್ತು ಶಾರೀರಕ {PHYSICAL} ಸ್ತರದಲ್ಲಿರುವುದನ್ನು ಗಮನಿಸಿದಾಗ ಸಂಸಾರದಲ್ಲಿ ಸಹಜವಾಗಿ ಉದ್ಭವಿಸಬಹುದಾದ ವಿಷಯಗಳನ್ನು ಈಕೆಯು ಸಹಜವಾಗಿ ಸ್ವೀಕರಿಸಿ ಅದನ್ನು ನಿವಾರಿಸಿಕೊಳ್ಳಲು ಅಸಮರ್ಥಳಾಗುತ್ತಾಳಾದ ಕಾರಣ ಶಾರೀರಕವಾದ ಸಮಸ್ಯೆಗಳು ಉದ್ಭವವಾಗುತ್ತಿವೆ, ವಾಸ್ತವದಲ್ಲಿ ಇದು ಲಕ್ಷಣವೇ ಹೊರತು {FUNCTIONAL} ನಿಜವಾದ ತೊಂದರೆಯಾಗಿರುವುದಿಲ್ಲ.
3. ಸೂಕ್ಷ್ಮ ಶರೀರದ ವಿಶೇಷ ಗುಣಗಳನ್ನು {SUBTLE CHARACTERISTICS} ಗಮನಿಸಿದಾಗ ಈಗಾಗಲೇ ಹೇಳಿರುವ ಭಾವನಾತ್ಮಕ {EMOTIONAL} ಸಮಸ್ಯೆಯು ಮಾನಸಿಕ {MENTAL}, ಅಂತರಾತ್ಮ {SOUL} ಮತ್ತು ಙ್ಞಾನವಾಹಿನಿಗಳ {SENSORIUM} ಕಾರ್ಯಕ್ಷಮತೆಯನ್ನು ಹಾಳುಮಾಡುತ್ತಿವೆ. ಇದರಿಂದಾಗಿಯೇ, ನಮ್ಮಲ್ಲಿರುವ 72,000 ನರಮಂಡಲಗಳಲ್ಲಿ ಙ್ಞಾನವಾಹಿನಿ ಮತ್ತು ಕ್ರಿಯಾವಾಹಿಗಳ ಮೇಲೆ ತನ್ನ ದುಷ್ಪರಿಣಾಮವನ್ನು ಬೀರಿ ಅವುಗಳ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತಿದೆ. ಇದರ ದುಷ್ಪರಿಣಾಮವಾಗಿ ಈಕೆಯ {MENTAL} ಚಿಂತನೆಯಲ್ಲಿ ಏರು-ಪೇರುಗಳುಂಟಾಗುತ್ತಿದೆಯಾದ ಕಾರಣ ಲೈಂಗಿಕ ಆಸಕ್ತಿ ಮೊದಲುಗೊಂಡು ಇನ್ನಿತರ ಸಮಸ್ಯೆಗಳು ಕಂಡು ಬರುತ್ತಿವೆ.
4. ಇನ್ನು ಸೂಕ್ಷ್ಮ ಶರೀರದ ಅತ್ಯಂತ ಪ್ರಮುಖ ಭಾಗವಾದ ಕುಂಡಲಿನಿ ಯೋಗಚಕ್ರಗಳಾದ ಸಹಸ್ರಾರ, ಆಙ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾದಿಸ್ಥಾನ ಮತ್ತು ಮೂಲಾಧಾರಗಳೆಲ್ಲವೂ ತಮಗೆ ನಿಗದಿಯಾದುದಕ್ಕಿಂತಲೂ ಹೆಚ್ಚಿನ ಕೆಲಸ {OVER ACTIVE} ಮಾಡಲಾರಂಭಿಸಿ ರೋಗಯುಕ್ತವಾಗಿವೆ, ಇದರೊಂದಿಗೆ ಅನುಬಂಧ ಹೊಂದಿರುವ ಕಿರಣಗಳು {RAYS} ಸಹ ನಿರ್ದಿಷ್ಟ ಗುರಿಯಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ.
5. ಸೂಕ್ಷ್ಮ ಶರೀರದ ಇನ್ನೊಂದು ಪ್ರಮುಖ ಭಾಗವಾದ ’ಮೆಂಟಲ್ ಬಾಡಿ’ {MENTAL BODY} ಮತ್ತು ’ಆಸ್ಟ್ರಲ್ ಬಾಡಿ’ {ASTRAL BODY} ಗಳು ಇಕ್ಕಟ್ಟಿನಲ್ಲಿ {CONGESTION} ಸಿಲುಕಿಕೊಂಡು ಕೆಲಸ ಮಾಡಲಾರದಾಗಿವೆ. ಇವುಗಳಿಂದಾಗಿಯೇ, ಮಾನಸಿಕ-ಭಾವನಾತ್ಮಕ {MENTAL-EMOTIONAL} ಹಾಗೂ ಮಾನಸಿಕ-ಸ್ಥೂಲ ಶರೀರದಲ್ಲಿ {EMOTIONAL-PHYSICAL} ಇರಬೇಕಾದ ಅನ್ಯೋನತೆಯಿಲ್ಲದೆ ತಮಗಿಷ್ಟ ಬಂದಂತೆ ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲ ಕಾರಣಗಳನ್ನು ಕೂಲಂಕಶವಾಗಿ ಅಧ್ಯಯನ ಮಾಡಿದಾಗ ಕಂಡುಬರುವುದೇನೆಂದರೆ ಈಕೆಯಲ್ಲಿ ಕಾಣುತ್ತಿರುವ ಸಮಸ್ಯೆಗಳೆಲ್ಲವೂ ಕೇವಲ ಬಾಹ್ಯ ಲಕ್ಷಣವೇ ಹೊರತು ನಿಜವಾದ ತೊಂದರೆಯಲ್ಲ.

ಚಿಕಿತ್ಸೆ ಮತ್ತು ಪರಿಣಾಮ :
ಈ ಮೇಲ್ಕಂಡ ಎಲ್ಲ ಅಂಶಗಳನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಗಮನಿಸಿ ಪರಿಪೂರ್ಣ ಸಿದ್ಧಾಂತವನ್ನು {HOLISTIC} ಅಳವಡಿಸಿಕೊಂಡು ಅಮೂಲ್ಯ ನವರತ್ನಗಳಿಂದ ಮಾಡಿದ ಔಷಧಗಳನ್ನು ವಿವಿಧ ರೀತಿಯಲ್ಲಿ ಸಂಯೋಜಿಸಿ ಅಮೂಲ್ಯ ಆಯುರ್ವೇದ ಔಷಧಗಳ ಜೊತೆಯಲ್ಲಿ ಕೊಟ್ಟು ಆಕೆಯ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಸೂಚಿಸಲಾಯಿತು. ಕೇವಲ ಮೂವತ್ತು ದಿನಗಳ ಚಿಕಿತ್ಸೆಯಲ್ಲಿಯೇ ಆಕೆಯಲ್ಲಿ ಸಾಕಷ್ಟು ಬದಲಾವಣೆಗಳುಂಟಾಗಿ ಆರೋಗ್ಯದತ್ತ ಹೆಜ್ಜೆ ಹಾಕುತ್ತಿದ್ದಾಳೆ. ಜೀವನದಲ್ಲಿ ಉತ್ಸಾಹ ಮೂಡಿದೆ. ಚಿಕಿತ್ಸೆ ಮುಂದುವರೆಯುತ್ತಿದೆ.