ಹದಿನಾಲ್ಕನೆಯ ಸಂಚಿಕೆ

ನನ್ನ ಮಾತು:
ಈ ಸಂಚಿಕೆಯಲ್ಲಿ ಮಧ್ಯ ವಯಸ್ಸಿನ ವೃತ್ತಿ ನಿರತರು, ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿರಂತರ ಚಟುವಟಿಕೆಗಳಿಂದ ಕೂಡಿದ ಎರಡು ಮಕ್ಕಳ ತಂದೆಯ ಬಗ್ಗೆ ಬರೆಯುತ್ತಿದ್ದೇನೆ. ಬಾಹ್ಯದಲ್ಲಿ ಇಷ್ಟು ಚಟುವಟಿಕೆಗಳಿಂದ ಕೂಡಿದ್ದರೂ, ಆಂತರ್ಯದಲ್ಲಿ ಬೇರೆ ವ್ಯಕ್ತಿಯೇ ಆಗಿದ್ದಾರೆ. ಓದಿ, ಅರ್ಥೈಸಿ, ಬರೆಯಿರಿ.
ವೃತ್ತಿ ಧರ್ಮದಂತೆ ಇಲ್ಲಿ ವಿವರಿಸಿರುವ ರೋಗಿಗಳ ಪರಿಚಯವನ್ನು ಕೊಡಲಾಗುವುದಿಲ್ಲ.

ಬಾಹ್ಯ ಲಕ್ಷಣಗಳು :
ಜೀರ್ಣ ಕ್ರಿಯೆಯಲ್ಲಿ ತೊಂದರೆ, ಅನಿದ್ರೆ, ಯಾವುದೇ ವಿಷಯದಲ್ಲೂ ಏಕಾಗ್ರತೆ ಇಲ್ಲದಿರುವುದು, ಮಧುಮೇಹದಿಂದ {DIABETIS} ನರಳುತ್ತಿದ್ದಾರೆ, ಶರೀರದಾದ್ಯಂತ ವರ್ಣಿಸಲಾಗದ ನೋವು, ಮೂತ್ರವಿಸರ್ಜನೆಯ ಅರಿವು ಬಂದ ತಕ್ಷಣವೇ ವಿಸರ್ಜಿಸಬೇಕು, ಒಂದು ಕ್ಷಣವೂ ತಡೆಹಿಡಿಯಲಾಗುವುದಿಲ್ಲ. ಇದರಿಂದಾಗಿ ದಿನಚರಿಯಲ್ಲಿ ನಾನಾ ಸಮಸ್ಯೆಗಳುಂಟಾಗುತ್ತಿವೆ.

ರೋಗ ನಿದಾನ ಮೆಡಿಕಲ್ ಡೌಸಿಂಗ್‍ನಿಂದ ಹೊರಬಂದ ಅಂಶಗಳು :
1. ರೋಗದ ಮೂಲಸ್ಥಾನವು ಗಂಟಲಾಗಿದೆ {THROAT}.
2. ಪಂಚತತ್ವಗಳಲ್ಲಿ ಜಲ, ಅಗ್ನಿ, ವಾಯುಗಳು ದೂಷಿತಗೊಂಡಿವೆ. ಸಪ್ತ ಧಾತುಗಳಲ್ಲಿ ರಕ್ತ, ಮಾಂಸ, ಮೇದಗಳು, ತನ್ಮಾತ್ರೆಗಳಲ್ಲಿ ರಸ ಮತ್ತು ಗಂಧಗಳು, ತ್ರಿಗುಣಗಳಲ್ಲಿ ಎಲ್ಲವೂ ಅಂದರೆ, ಸತ್ವ, ರಜ, ತಮೋ ಗುಣಗಳು ವ್ಯತ್ಯಯಗೊಂಡಿವೆ. ತ್ರಿದೋಷಗಳಾದ ವಾತ್ತ-ಪಿತ್ತ-ಕಫಗಳಲ್ಲಿ ಅಸಮತೆ.
3. ಸಮಸ್ಯೆಗಳು ಮಾನಸಿಕ {MENTAL}, ಭಾವನಾತ್ಮಕ {EMOTIONAL}, ಭೌಧ್ಯಾತ್ಮಕ {INTUTIONAL} ಸ್ತರಗಳಿಂದ ಕೂಡಿದೆ.
4. ಸೂಕ್ಷ್ಮ ಶರೀರದ ವಿಶೇಷ ಗುಣಗಳನ್ನು {SUBTLE CHARACTERISTICS} ಗಮನಿಸಿದಾಗ ಚೈತನ್ಯ {VITALITY}, ಮಾನಸಿಕ ಚೈತನ್ಯ {MENTAL VITALITY}, ಹೇಳಬೇಕೆನ್ನಿರುವ ವಿಷಯಗಳನ್ನು ಹೇಳಲಾಗದಿರುವ {SELF-EXPRESSION} ಸಮಸ್ಯೆಗಳು ಕಾಡುತ್ತಿವೆ.
5. 72,000 ನರಮಂಡಲವೂ ಸುವ್ಯವಸ್ಥಿತವಾಗಿ ಕೆಲಸ ಮಾಡದಿರುವುದು.
6. ಸಪ್ತಚಕ್ರಗಳಾದ ಸಹಸ್ರಾರ, ಆಙ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾದಿಸ್ಥಾನ ಮತ್ತು ಮೂಲಾಧಾರಗಳೆಲ್ಲವೂ ಅತಿ ಹೆಚ್ಚಿನ ಕೆಲಸ {OVER ACTIVE} ಮಾಡುತ್ತ ಅವ್ಯವಸ್ಥಿತಗೊಂಡಿವೆ. ಇವುಗಳೊಂದಿಗೆ ಅನುಬಂಧ ಹೊಂದಿರುವ ಕಿರಣಗಳೂ {RAYS} ಸಹ ತಮ್ಮ ಮನಬಂದಂತೆ ಕೆಲಸ ಮಾಡುತ್ತಿವೆ.
7. ಪರಿಪೂರ್ಣ {HOLISTIC} ಚಿಕಿತ್ಸೆಯಲ್ಲಿ ವಿಶೇಷವಾಗಿ ಗಮನಿಸಿರುವ MENTAL BODY, ASTRAL BODY, ETHERIC BODY, ಸೂಕ್ಷ್ಮ ಶರೀರಗಳಲ್ಲಿ {SUBTLE BODY} ಇರಬೇಕಾದ ಹೊಂದಾಣಿಕೆ {CO-ORDINATION} ಇಲ್ಲವೇ ಇಲ್ಲ.
8. ಮಾನಸಿಕ ಅಂಶಗಳನ್ನು {PSYCHOLOGICAL FACTORS} ಗಮನಿಸಿದಾಗ ಅವ್ಯಕ್ತ ಆತಂಕ {ANXIETY}, ಭವಿಷ್ಯ ಜೀವನದ ಚಿಂತೆ {FUTURE LIFE}, ಮುಂದೆ ಉಂಟಾಗುವ ಲೈಂಗಿಕ ಸಮಸ್ಯೆಯ ಸೂಚನೆ ಕೊಟ್ಟಿದೆ.

ವಿಶ್ಲೇಷಣೆ :
1. ರೋಗದ ಮೂಲಸ್ಥಾನವು ಗಂಟಲಾಗಿರುವುದರಿಂದ ಇದಕ್ಕೆ ಹೊಂದಿಕೊಂಡಿರುವ ವಿಶುದ್ಧ ಚಕ್ರ ಮತ್ತು ಥೈರಾಯ್ಡ್ ಗ್ರಂಥಿಯ {THYROID GLAND} ಅವ್ಯವಸ್ಥೆಯನ್ನು ತೋರಿಸುತ್ತಿದೆ.
2. ಪಂಚ ತತ್ವಗಳಲ್ಲಿ ಜಲ ಧಾತುವು ದುಷ್ಟಗೊಂಡಿರುವ ಕಾರಣ ಜೀವಜಲವಾದ ರಕ್ತದಲ್ಲಿ ದೋಷ ಉಂಟಾಗಿದೆ. ಅಂತೆಯೇ, ಅಗ್ನಿ ತತ್ವದ ಸಮಸ್ಯೆಯಿಂದಾಗಿ ಜೀರ್ಣಕ್ರಿಯೆಯಲ್ಲಿ ಅಡೆಚಣೆ. ಇದರ ಫಲವಾಗಿ ಮಧುಮೇಹ {DIABETIS} ಕಾಡುತ್ತಿದೆ. ವಾಯುತತ್ವದಿಂದಾಗಿ ನರಮಂಡಲ ಸುವ್ಯವಸ್ಥಿತವಾಗಿಲ್ಲ. ಇವುಗಳಿಗೆ ಸಪ್ತಧಾತುಗಳು, ತನ್ಮಾತ್ರೆಗಳು, ತ್ರಿಗುಣಗಳು ಮತ್ತು ತ್ರಿದೋಷಗಳು ಒತ್ತು ಕೊಡುತ್ತಿವೆ.
3. ಇವರ ಸಮಸ್ಯೆಯು ಮಾನಸಿಕ {MENTAL}, ಭಾವನಾತ್ಮಕ {EMOTIONAL}, ಭೌಧ್ಯಾತ್ಮಕ {INTUTIONAL} ಸ್ತರದಲ್ಲಿರುವುದರಿಂದ ಇವರ ಚಿಂತನೆ ಮತ್ತು ಕಾರ್ಯಕ್ರಮಗಳಲ್ಲಿ ಖಾಚಿತ್ಯವುಳ್ಳದೆ ಅನವಶ್ಯಕ ಗೊಂದಲಗಳನ್ನು ಉಂಟುಮಾಡಿಕೊಳ್ಳುತ್ತಿವೆ.
4. ಸೂಕ್ಷ್ಮ ಶರೀರದ ವಿಶೇಷ ಗುಣಗಳಲ್ಲಿ {SUBTLE CHARACTERISTICS} ಇರಬೇಕಾದ ಗುಣಗಳು ಇಲ್ಲದ ಕಾರಣ ನಾನಾ ರೀತಿಯಲ್ಲಿ ಸ್ಥೂಲ ಶರೀರದಲ್ಲಿ {PHYSICAL BODY} ಸಮಸ್ಯೆಗಳುಂಟಾಗುತ್ತಿವೆ. ಇದರ ಫಲಶೃತಿಯಾಗಿ ಸ್ಥೂಲ ಶರೀರದ {PHYSICAL BODY} 72,000 ನರಮಂಡಲಗಳ ಕಾರ್ಯವೈಖರಿಯಲ್ಲಿ ನ್ಯೂನತೆಯಿದೆ.
5. ಪರಿಪೂರ್ಣ ಚಿಕಿತ್ಸೆಯ {HOLISTIC TREATMENT} ಮುಖ್ಯ ಅಂಗವಾದ MENTAL BODY, ASTRAL BODY, ETHERIC BODYಗಳಲ್ಲಿ ಹೊಂದಾಣಿಕೆಯಿಲ್ಲದ ಕಾರಣ ಸೂಕ್ಷ್ಮ ಶರೀರದ {SUBTLE BODY} ಮತ್ತು ಸ್ಥೂಲ ಶರೀರದ {PHYSICAL BODY} ಕಾರ್ಯಕ್ಷಮತೆಯಲ್ಲಿ ಸಾಕಷ್ಟು ತೊಡಕುಂಟಾಗುತ್ತಿದೆ.
6. ಮಾನಸಿಕ ಅಂಶಗಳನ್ನು {PSYCHOLOGICAL FACTORS} ಗಮನಿಸಿದಾಗ ಅವ್ಯಕ್ತ ಗೊಂದಲಗಳಿಂದ ನರಳುತ್ತಿದ್ದಾರೆ.
7. ಸೂಕ್ಷ್ಮ ಶರೀರದ {SUBTLE BODY} ಅತಿ ಮುಖ್ಯ ಭಾಗವಾದ ಎಲ್ಲ ಏಳೂ ಚಕ್ರಗಳೂ ಅತಿ ಹೆಚ್ಚು ಕೆಲಸ ಮಾಡುತ್ತಾ {OVER ACTIVE} ಈಗಾಗಲೇ ವಿಶ್ಲೇಷಿಸಿರುವ ಎಲ್ಲ ಅಂಶಗಳಿಗೂ ಒತ್ತು ಕೊಡುತ್ತಿದೆ.

ಚಿಕಿತ್ಸೆ ಮತ್ತು ಪರಿಣಾಮ :
ಈ ಮೇಲ್ಕಂಡ ಎಲ್ಲ ಅಂಶಗಳನ್ನು ಗಹನವಾಗಿ ಗಮನಿಸಿ ಒಂದು ವಿಶೇಷ ರೀತಿಯಲ್ಲಿ ರತ್ನೌಷಧಗಳು ಮತ್ತು ಆಯುರ್ವೇದ ಔಷಧಗಳನ್ನು ಸಂಯೋಜಿಸಿ ಕೊಡಲಾಯಿತು. ಸುಮಾರು 100 ದಿನಗಳಲ್ಲಿ ಇವರಲ್ಲಿ ಸಾಕಷ್ಟು ಮೇಲುನೊಟಕ್ಕೇ ಕಂಡುಬರುವಂತಃ ಸುಧಾರಣೆಗಳು ಕಂಡುಬಂದಿವೆ. ಆಗ್ಗಾಗ್ಗೆ ಮೌಲ್ಯಮಾಪನವನ್ನೂ ಮಾಡಲಾಗುತ್ತಿದೆ. ಈ ರೋಗಿಯು ವೈದ್ಯನಿಗೆ ತೆಲೆನೋವುಂಟು ಮಾಡುತ್ತಲೇ ಇರುತ್ತಾರೆ ಕಾರಣ ಅವರೇ ಹೇಳುವಂತೆ ಅವರ ಕಾರ್ಯವೈಖರಿಯಿಂದಾಗಿ ಕ್ರಮಬದ್ಧವಾಗಿ ಔಷಧ ಸೇವನೆ ಮಾಡುವುದಿಲ್ಲ. ಸೂಚಿಸುವ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲಾಗುತ್ತಿಲ್ಲ, ಅದಾಗಿಯೂ ನಾನು ರೋಗಮುಕ್ತನಾಗುತ್ತಿದ್ದೇನೆ, ನನ್ನ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಉತ್ಸಾಹ, ಕಾರ್ಯಕ್ಷಮತೆ ಉಂಟಾಗಿದೆ ಎಂದು ವೈದ್ಯರಿಗೇ ಸಮಾಧಾನ ಹೇಳುತ್ತಾರೆ. ಚಿಕಿತ್ಸೆ ಅನಿಯಮಿತವಾಗಿಯೇ ಮುಂದುವರೆದಿದೆ.