ಹದಿನೈದನೆಯ ಸಂಚಿಕೆ

ನನ್ನ ಮಾತು:
ಈ ಸಂಚಿಕೆಯಲ್ಲಿ ವೈವಾಹಿಕ ಸಂಬಂಧಗಳು ಮುರಿದುಬಿದ್ದಾಗ ಎನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಬಡತನದ ಕುಟುಂಬ, ಅಕ್ಷರ ಙ್ಞಾನವೂ ಸರಿಯಾಗಿಲ್ಲ, ಒಂದು ಮಗುವಿನ ತಾಯಿ, ತನ್ನ ಮತ್ತು ಮಗನ ಉದರ ಪೋಷಣೆ ಇತರೆಯವರ ಕೃಪಾ ಕಟಾಕ್ಷದ ಮೇಲೆ ಅವಲಂಬಿತ. ಹೀಗಿರುವಾಗ ತನ್ನ ಆರೋಗ್ಯದ ಬಗ್ಗೆ ಮಗನ ವಿದ್ಯೆಯ ಬಗ್ಗೆ ಯೋಚಿಸುವಂತೆಯೇ ಇಲ್ಲ. ಇದೆಂತಹ ದಾರುಣ ಜೀವನ? ಓದಿ, ಅರ್ಥೈಸಿ, ಬರೆಯಿರಿ.
ವೃತ್ತಿ ಧರ್ಮದಂತೆ ಇಲ್ಲಿ ವಿವರಿಸಿರುವ ರೋಗಿಗಳ ಪರಿಚಯವನ್ನು ಕೊಡಲಾಗುವುದಿಲ್ಲ.

ರೋಗಿ :
ಮೂವತ್ತೆಂಟು ವರ್ಷ ವಯೋಮಾನದ ವಿವಾಹ ವಿಚ್ಛೇದಿತೆ, ಒಂದು ಮಗುವಿನ ತಾಯಿ, ಅವಿದ್ಯಾವಂತೆ.

ಬಾಹ್ಯ ಲಕ್ಷಣಗಳು :
ಅಜೀರ್ಣ, ಸರ್ವಾಂಗದಲ್ಲೂ ವಾತ ಬಾಧೆ, ಜೀವನದ ನಿರಾಸಕ್ತಿ, ನಿದ್ರಾಭಂಗ, ಋತು ಚಕ್ರದಲ್ಲೂ ವ್ಯತ್ಯಯ.

ರೋಗ ನಿದಾನ ಮೆಡಿಕಲ್ ಡೌಸಿಂಗ್‍ನಿಂದ ಹೊರಬಂದ ಅಂಶಗಳು :
1. ರೋಗದ ಮೂಲ ಸ್ಥಾನವು ಗಂಟಲು ಮತ್ತು ಜನನಾಂಗ.
2. ಪಂಚ ತತ್ವಗಳಲ್ಲಿ ಪೃಥ್ವಿ, ಜಲಾ ಮತ್ತು ಅಗ್ನಿಗಳಲ್ಲಿ ವ್ಯತ್ಯಯ.
3. ಸಪ್ತ ಧಾತುಗಳಲ್ಲಿ ಮಾಂಸ, ರಕ್ತ ಮತ್ತು ಮೇದವು ದುಷ್ಟಗೊಂಡಿವೆ.
4. ರೋಗವು ಭಾವನಾತ್ಮಕ {EMOTIONAL} ಮತ್ತು ಮಾನಸಿಕ {MENTAL} ಸ್ತರದಲ್ಲಿದೆ. ಇದನ್ನು ಪ್ರಾಣಮಯ ಮತ್ತು ಮನೋಮಯ ಕೋಶಗಳು ಪುಷ್ಠೀಕರಿಸುತ್ತಿವೆ.
5. ಶಾರೀರಕ ವಿಶೇಷ ಗುಣಗಳು, ಮಾಂಸ ಪೇಶಿಗಳು ಮತ್ತು ನಮ್ಮಲ್ಲಿರುವ 72,000 ನರಮಂಡಲದ ಕಾರ್ಯಕ್ಷಮತೆಯು ಕುಂಠಿತಗೊಂಡಿವೆ.
6. ಮಾನಸಿಕ ವಿಶೇಷ ಗುಣಗಳು ತನ್ನ ಪ್ರತಿ ಮತ್ತು ಇತರ ಕುಟುಂಬದ ಸದಸ್ಯರಿಂದ ಅನುಕಂಪ ಸಹಾನುಭೂತಿಯನ್ನು ಬಯಸುತ್ತಿದೆ. ಭವಿಷ್ಯದ ಜೀವನ ಮತ್ತು ಆರೋಗ್ಯದ ಬಗ್ಗೆ ಆತಂಕ. ತನಗೆ ಆರೋಗ್ಯ ಉಂಟಾಗದಿದ್ದರೆ ಮರಣ ಬರಲಿ.
7. ರಸ ಮತ್ತು ಗಂಧ ತನ್ಮಾತ್ರೆಯಲ್ಲಿ ವ್ಯತ್ಯಯ.
8. ಸಪ್ತ ಚಕ್ರಗಳೆಲ್ಲವೂ ಅಂದರೆ ಸಹಸ್ರಾರ, ಆಙ್ಞ, ಅನಾಹತ, ಸ್ವಾಧಿಸ್ತಾನ ಮತ್ತು ಮೂಲಾಧಾರಗಳು ಅತಿ ಹೆಚ್ಚು ಕೆಲಸ {OVER ACTIVE} ಮಾಡುತ್ತಿವೆ. ವಿಶುದ್ಧ ಮತ್ತು ಮಣಿಪುರ ಚಕ್ರಗಳು ಅತಿ ಕಡಿಮೆ {UNDER ACTIVE} ಕೆಲಸ ಮಾಡುತ್ತಿವೆ. ಇವುಗಳೊಂದಿಗೆ ಅನುಬಂಧ ಹೊಂದಿರುವ ಕಿರಣಗಳಲ್ಲಿ {RAYS} ಎರಡು ಸಮಸ್ಥಿತಿಯಲ್ಲಿದೆ, ಉಳಿಕೆ ಐದು ಸಮಸ್ಯಗಳಿಗೆ ಇಂಬುಕೊಡುತ್ತಿವೆ.
9. ಸೂಕ್ಷ್ಮ ಶರೀರದಲ್ಲಿಯೇ ಅಂತರ್ಗತವಾಗಿರುವ ಮಾನಸಿಕ ಮತ್ತು ಭಾವನಾತ್ಮಕಗಳು ತನ್ನ ಕಾರ್ಯನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಇದರಿಂದಾಗಿ ಸ್ಥೂಲ ಶರೀರದೊಂದಿಗೆ ಇರಬೇಕಾದ ಹೊಂದಿಕೆಯನ್ನು {CO-ORDINATION} ಕಳೆದುಕೊಂಡಿವೆ.

ವಿಶ್ಲೇಷಣೆ :
ಮೇಲ್ಕಂಡ ಎಲ್ಲಾ ಅಂಶಗಳನ್ನು ಕೂಲಂಕಶವಾಗಿ ಗಮನಿಸಬೇಕಾದುದು ಅತ್ಯಾವಶ್ಯಕ.
1. ರೋಗದ ಮೂಲಸ್ಥಾನವು ಗಂಟಲಾಗಿರುವುದನ್ನು ಗಮನಿಸಿದಾಗ ವಿಶುದ್ಧ ಚಕ್ರದಲ್ಲಿರುವ ಅಸಮತೆ ಇದರೊದಿಗೆ ಅನುಬಂಧ ಹೊಂದಿರುವ ನಿರ್ನಾಳ ಗ್ರಂಥಿಯಾದ {ENDOCRINE} ಥೈರಾಯ್ಡ್‌ನ ಕಾರ್ಯಕ್ಷಮತೆಯಲ್ಲಿ ಕುಂದುಂಟಾಗಿರುವುದು. ಅಂತೆಯೇ, ಜನನಾಂಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಮೂಲಾಧಾರ ಚಕ್ರ ಮತ್ತು ಇದರೊಂದಿಗೆ ಹೊಂದಿಕೊಂಡಿರುವ ಅಡ್ರೆನಿಲ್ ಗ್ರಂಥಿಯು ಅವ್ಯವಸ್ಥೆಯಾಗಿರುವುದು ಎದ್ದು ಕಾಣುತ್ತಿವೆ.
2. ಪಂಚ ತತ್ವಗಳಲ್ಲಿ ಪೃಥ್ವಿಯು ಮೂಲಾಧಾರ ಚಕ್ರದೊಂದಿಗೆ ಹೊಂದಿರುವ ಅನುಬಂಧದಿಂದಾಗಿ ಮಾಂಶ ಪೇಶಿಗಳ ಮೇಲೆ ದುಷ್ಟ ಪರಿಣಾಮ ಬೀರುತ್ತಿದೆ. ಜಲತತ್ವದ ವ್ಯತ್ಯಯದಿಂದಾಗಿ ಜೀವಜಲವಾದ ರಕ್ತಧಾತುವು ದುಷ್ಟಗೊಂಡಿದೆ. ಅಗ್ನಿತತ್ವದ ಅಸಮತೆಯಿಂದಾಗಿ ವಚನಕ್ರಿಯೆಯಲ್ಲಿ ವ್ಯತ್ಯಯ ಉಂಟಾಗಿದ್ದು ಜೀರ್ಣಕ್ರಿಯೆಯು ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದಾಗಿ ಮೇದ ಧಾತುವು ದುಷ್ಟಗೊಂಡು ನರಮಂಡಲದ ಕಾರ್ಯಕ್ಷಮತೆಯನ್ನು ಹಾಳುಮಾಡಿದೆ.
3. ತನ್ಮಾತ್ರೆಗಳಲ್ಲಿ ರಸ ಮತ್ತು ಗಂಧ ದುಷ್ಟಗೊಂಡು ಈ ಎಲ್ಲ ಸಮಸ್ಯೆಗಳಿಗೆ ಒತ್ತುಕೊಡುತ್ತಿವೆ.
4. ರೋಗವು ಭಾವನಾತ್ಮಕ ಮತ್ತು ಮಾನಸಿಕ ಸ್ತರದಲ್ಲಿರುವುದಿಂದಾಗಿ ಸಮಸ್ಯೆಗಳಿಗೆ ಒಂದಕ್ಕೆ ಮತ್ತೊಂದು ಒತ್ತು ಕೊಡುತ್ತಿದೆ, ಇದಕ್ಕೆ ಯೋಗಾಭ್ಯಾಸಿಗಳು ಪ್ರತಿಪಾಲಿಸುವ ಪಂಚಕೋಶಗಳಲ್ಲಿ ಪ್ರಾಣಮಯ ಮತ್ತು ಮನೋಮಯ ಕೋಶಗಳು ಪುಷ್ಟೀಕರಿಸುತ್ತಿವೆ.
5. ಶಾರೀರಕ ವಿಶೇಷ ಗುಣಗಳು ಮಾಂಸ ಪೇಶಿಗಳು ಮತ್ತು ನರಮಂಡಲದಲ್ಲಿರುವ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿರುವುದು, ಪಂಚ ತತ್ವದಲ್ಲಿರುವ ಸಮಸ್ಯೆಗಳು ಮತ್ತು ಸಪ್ತ ಧಾತುಗಳು ಸಮರ್ಥಿಸುತ್ತಿವೆ.
6. ಈಕೆ ವಿವಾಹ ವಿಚ್ಛೇದನ ಪಡೆದು ಪತಿಯಿಂದ ದೂರವಿರುತ್ತಾರಾದರೂ ಆತನಿಂದ ಮತ್ತು ಕುಟುಂಬದ ಸದಸ್ಯರಿಂದ ಅನುಕಂಪ ಸಹಾನುಭೂತಿಯನ್ನು ಪಡೆಯಬೇಕೆಂಬ ಉತ್ಕಟ ಇಚ್ಛೆಯಿರುವುದನ್ನು, ತನ್ನ ಮತ್ತು ಮಗುವಿನ ಮುಂದಿನ ಜೀವನ ಉತ್ತಮವಾಗಿರಬೇಕೆಂಬುದನ್ನು ಅಂತರಾಳದಲ್ಲಿ ಹುದುಗಿಸಿಕೊಂಡಿರುವುದನ್ನು ಸೂಚಿಸುತ್ತಿದೆ. ಅಂತೆಯೇ, ತಾನು ಪರಿಪೂರ್ಣ ಆರೋಗ್ಯವಂತಳಾಗಬೇಕೆಂಬ ಉತ್ಕಟ ಇಚ್ಛೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಮರಣವೇ ಒಳ್ಳೆಯದೆಂದು ಯೋಚಿಸುತ್ತಿರುವುದನ್ನು ಗಮನಿಸಿದಾಗ ಈಕೆಯ ಅಂತರಾತ್ಮವು ದ್ವಂದ್ವಗಳಿಂದ ಕೂಡಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ.
7. ಸಪ್ತ ಚಕ್ರಗಳಲ್ಲಿ ವಿಶುದ್ಧ ಮತ್ತು ಮಣಿಪುರಗಳನ್ನು ಬಿಟ್ಟು ಉಳಿದ ಐದೂ ಚಕ್ರಗಳು ನಿಗದಿತವಾದಕ್ಕಿಂತಲೂ ಹೆಚ್ಚು ಕೆಲಸ ಮಾಡುತ್ತಿರುವ ಕಾರಣಗಳಿಂದ ಸಂಬಂಧಿತ ನಿರ್ನಾಳ ಗ್ರಂಥಿಗಳ {ENDOCRINE} ಕಾರ್ಯದಲ್ಲಿ ಮತ್ತು ಅವುಗಳೊಂದಿಗೆ ಅನುಬಂಧ ಹೊಂದಿರುವ ಕಿರಣಗಳು {RAYS} ಅಸಹಜ ರೀತಿಯಲ್ಲಿ ವರ್ತಿಸುತ್ತಿವೆ. ಅಂತೆಯೇ, ವಿಶುದ್ಧ ಮತ್ತು ಮಣಿಪುರಗಳು ಅತಿ ಕಡಿಮೆ ಕೆಲಸ ಮಾಡುವ ಮೂಲಕ ಸಮಸ್ಯೆಗಳನ್ನು ಮತ್ತಷ್ಟು ಜಟಿಲಗೊಳಿಸುತ್ತಿವೆ.
8. ಸೂಕ್ಷ್ಮ ಶರೀರದಲ್ಲಿ ಅಂತರ್ಗತವಾಗಿರುವ ಮಾನಸಿಕ ಮತ್ತು ಭಾವನಾತ್ಮಕಗಳು ತಮ್ಮ ಕಾರ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲವಾದ ಕಾರಣ ಸ್ಥೂಲ ಶರೀರದ ಮೇಲೆ ಇರಬೇಕಾದ ಹೊಂದಾಣಿಕೆ ಇಲ್ಲದಂತಾಗಿ {LACK OF CO-ORDINATION} ನಾನಾ ಸಮಸ್ಯೆಗಳನ್ನುಂಟು ಮಾಡುತ್ತಿವೆ.

ಚಿಕಿತ್ಸೆ :
ಮೇಲ್ಕಂಡ ಎಲ್ಲಾ ಅಂಶಗಳನ್ನು ಸೂಕ್ಷ್ಮಾತಿಸೂಕ್ಷ್ಮವಾಗಿ ಗಮನಿಸಿ ಪರಿಪೂರ್ಣ {HOLISTIC} ಚಿಕಿತ್ಸೆಯನ್ನು ಆಯೋಜಿಸಿ ವಿವಿಧ ರೀತಿಯಲ್ಲಿ ದಿವ್ಯ ರತ್ನೌಷಧಗಳನ್ನು ಮತ್ತು ಸೂಕ್ತ ರೀತಿಯ ಆಯುರ್ವೇದ ಔಷಧಗಳನ್ನು ಕೊಡಲಾಯಿತು, ಎರಡು ತಿಂಗಳ ಚಿಕಿತ್ಸೆಯ ನಂತರ ಆಕೆಯಲ್ಲಿ ಸಾಕಷ್ಟು ಮಾರ್ಪಾಟುಗಳಾಗಿ ರೋಗ ಮುಕ್ತ ಲಕ್ಷಣಗಳು ಗೋಚರಿಸಲಾರಂಭಿಸಿದೆ. ರೋಗ ಮುಕ್ತಳಾಗಿ ತನ್ನ ಜೀವನವನ್ನು ತಾನೇ ರೂಪಿಸಿಕೊಳ್ಳಬೇಕೆಂಬ ದಿಶೆಯಲ್ಲಿ ಸಾಗುತ್ತಿದ್ದಾಳೆ. ಚಿಕಿತ್ಸೆಯು ಮುಂದುವರೆಯುತ್ತಿದೆ.