ಹದಿನೇಳನೆಯ ಸಂಚಿಕೆ

ನನ್ನ ಮಾತು:
ಈ ಸಂಚಿಕೆಯಲ್ಲಿ ಮತ್ತೊಮ್ಮೆ ಒಬ್ಬ ಹಿರಿಯ ಮಹಿಳೆಯ ಬಗ್ಗೆ ಬರೆಯುತ್ತಿದ್ದೇನೆ. ಸಾಮಾನ್ಯವಾಗಿ ಹಿರಿಯರು ಲೈಂಗಿಕತೆಯ ವಿಚಾರದಿಂದ ಮುಕ್ತರಾಗಿರುತ್ತಾರೆಂದು ಭಾವಿಸುತ್ತೇವೆ, ಆದರೆ ಇದು ಸರಿಯಲ್ಲ ಎಂಬುದನ್ನು ಈಗ ವಿವೇಜಿಸುವ ಮಹಿಳಾ ರೋಗಿ ತಿಳಿಸುತ್ತಿದ್ದಾರೆ. ಓದಿ, ಅರ್ಥೈಸಿ, ಬರೆಯಿರಿ.
ವೃತ್ತಿ ಧರ್ಮದಂತೆ ಇಲ್ಲಿ ವಿವರಿಸಿರುವ ರೋಗಿಗಳ ಪರಿಚಯವನ್ನು ಕೊಡಲಾಗುವುದಿಲ್ಲ.

ಬಾಹ್ಯ ಲಕ್ಷಣಗಳು :
ಸ್ಥೂಲ ಶರೀರಿ, ಅಜೀರ್ಣ ಸಮಸ್ಯೆಗಳು, ನಿದ್ರಾನಾಶ, ಸುಲಲಿತವಾಗಿ ಮಾತನಾಡಲಾರಳು-ಬಹಳ ಕಷ್ಟದಿಂದ ಮಾತನಾಡಲು ಪ್ರಯತ್ನಿಸುತ್ತಾರೆ, ಆದರೆ ಆ ಮಾತು ಸ್ಪಷ್ಟವಾಗಿರುವುದಿಲ್ಲ ಬೇರೆಯವರು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ, ಶರೀರದಾದ್ಯಂತ ನೋವು, ಜೀವದ ಬಗ್ಗೆ ಜಿಗುಪ್ಸೆ.

ರೋಗ ನಿದಾನ ಮೆಡಿಕಲ್ ಡೌಸಿಂಗ್‍ನಿಂದ ಹೊರಬಂದ ಅಂಶಗಳು :
1. ರೋಗದ ಮೂಲಸ್ಥಾನವು ಮನಸ್ಸು ಮತ್ತು ಗಂಟಲಾಗಿರುತ್ತವೆ.
2. ಪಂಚ ತತ್ವಗಳಲ್ಲಿ ಜಲ ಮತ್ತು ವಾಯು, ಸಪ್ತಧಾತುಗಳಲ್ಲಿ ರಕ್ತ, ಮೇದ ಮತ್ತು ಮಜ್ಜಾಗಳು, ತನ್ಮಾತ್ರೆಯಲ್ಲಿ ರಸವು, ತ್ರಿಗುಣಗಳಾದ ಸತ್ವ, ರಜೊ, ತಮಗಳೆಲ್ಲವೂ ದುಷ್ಟಗೊಂಡಿವೆ.
3. ರೋಗವು ಮಾನಸಿಕ ಮತ್ತು ಶಾರೀರಕ ಸ್ತರದಲ್ಲಿದೆ.
4. ಸೂಕ್ಷ್ಮ ಶರೀರದ ವಿಶೇಷ ಗುಣಗಳಲ್ಲಿ {SUBTLE CHARACTERISTICS} ಮಾನಸಿಕ {MENTLE}, ಙ್ಞಾನವಾಹಿನಿ {SENSORIUM} ಮತ್ತು ಒಳ ಹೃದಯ {CELL LIFE} ಸಂಬಂಧಗಳಲ್ಲಿ ಕಾರ್ಯಕ್ಷಮತೆ ಇಲ್ಲದಿರುವುದು.
5. ಮಾನಸಿಕ ಅಂಶಗಳನ್ನು ಗಮನಿಸಿದಾಗ ಇದು ಆತಂಕ {ANXIETY} ಮತ್ತು ಇಚ್ಛೆಯ {DESIRE} ಕಡೆಗೆ ಸಾಗುತ್ತಿದೆ, ಅತಿಯಾಗಿ ತನ್ನ ಆರೋಗ್ಯ ಮತ್ತು ಲೈಂಗಿಕತೆಯತ್ತ ಆಳವಾಗಿ ಬೇರೂರಿದೆ.
6. ಸ್ಥೂಲ ಶರೀರದ ವಿಶೇಷ ಗುಣಗಳನ್ನು {PHYSICAL CHARACTERISTICS} ಗಮನಿಸಿದಾಗ ಅದು ಪ್ರಾಣವಾಹಕ {CNS}, ನರಮಂಡಲ ಮತ್ತು ಮಾಂಸ ಪೇಶಿಗಳಲ್ಲಿರುವ {MUSCULAR} ನ್ಯೂನತೆಯನ್ನು ಎತ್ತಿ ತೋರಿಸುತ್ತಿದೆ.
7. ಸೂಕ್ಷ್ಮ ಶರೀರದ ಅವಿಭಾಜ್ಯ ಅಂಗಗಳಾದ ಕುಂಡಲಿನಿ ಯೋಗಚಕ್ರಗಳಾದ ಸಹಸ್ರಾರ, ಆಙ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾದಿಸ್ಥಾನ, ಮೂಲಾಧಾರಗಳೆಲ್ಲವೂ ನಿಗಿದಿತಕ್ಕಿಂತ ಹೆಚ್ಚು {OVER ACTIVE} ಕೆಲಸ ಮಾಡುತ್ತಿವೆ, ಅಂತೆಯೇ ಈ ಯೋಗಚಕ್ರಗಳ ಅನುಬಂಧಿಯಾದ ಏಳೂ ಕಿರಣಗಳೂ {RAYS} ಸಹ ದುಷ್ಟಗೊಂಡಿವೆ.
8. ಸೂಕ್ಷ್ಮ ಶರೀರದ ಮತ್ತೊಂದು ಅತಿ ಗಹನವಾದ “ಮೆಂಟಲ್ ಬಾಡಿ”ಯು {MENTLE BODY} ಇಕ್ಕಟ್ಟಿನಲ್ಲಿ {CONGESTION} ಸಿಕ್ಕಿ ತನ್ನ ಕಾರ್ಯನಿರ್ವಹಣೆಯಲ್ಲಿ ಅಸಮರ್ಥವಾಗಿದೆ, ಮಾನಸಿಕ ಮತ್ತು ಸ್ಥೂಲ ಶರೀರದ ಕಾರ್ಯಕ್ಷಮತೆಯಲ್ಲಿ ಅಸಮತೆ ಉಂಟಾಗಿದೆ. ಅಂತೆಯೇ, ಏಳೂ ನಿರ್ನಾಳ ಗ್ರಂಥಿಗಳ {ENDOCRINE} ಕಾರ್ಯಕ್ಷಮತೆಯಲ್ಲಿಯೂ ವ್ಯತ್ಯಯ ಉಂಟಾಗಿದೆ.

ವಿಶ್ಲೇಷಣೆ :
1. ರೋಗದ ಮೂಲಸ್ಥಾನವು ಮನಸ್ಸು ಮತ್ತು ಗಂಟಾಲಾಗಿರುವುದನ್ನು ಗಮನಿಸಿದಾಗ, ಇದು ಜಲ ಮತ್ತು ವಾಯು ತತ್ವಗಳು ದುಷ್ಟವಾಗಿರುವುದನ್ನು ಸಮರ್ಥಿಸುತ್ತದೆ. ಅಂತೆಯೇ, ಸಪ್ತಧಾತುಗಳಲ್ಲಿ ರಕ್ತ, ಮೇದ, ಮಜ್ಜಾಗಳು, ತನ್ಮಾತ್ರೆಯಲ್ಲಿ ರಸವು ದುಷ್ಟವಾಗಿರುವುದು ಮತ್ತೊಮ್ಮೆ ಇದನ್ನು ಸಮರ್ಥಿಸುತ್ತದೆ.
2. ರೋಗವು ಮಾನಸಿಕ ಮತ್ತು ಶಾರೀರಕ ಸ್ತರದಲ್ಲಿರುವುದನ್ನು ಗಮನಿಸಿದಾಗ ತನ್ನ ದೈನಂದಿನ ಕ್ರಿಯೆಗಳಲ್ಲಿ ಎಲ್ಲಿಯಾದರೂ ನ್ಯೂನತೆ ಕಂಡುಬಂದಾಗ ಅದಕ್ಕೆ ಸೂಕ್ತ ರೀತಿಯಲ್ಲಿ ವರ್ತಿಸಬೇಕಾದುದು ಅತ್ಯಾವಶ್ಯಕ ಅದರಂತೆ ನಡೆದುಕೊಳ್ಳುವುದು ಮತ್ತು ಮಾತನಾಡಲೇಬೇಕಾಗುತ್ತದೆ. ಹೀಗೆ ನಡುದುಕೊಳ್ಳಲು ಪ್ರಯತ್ನಿಸಿದಾಗ ಈಕೆ ಮಾತನಾಡಲಾರಳು, ಮಾತನಾಡಿದರೂ ಇತರರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಮಾನಸಿಕ ಮತ್ತು ಶಾರೀರಕ ಕ್ರಿಯೆಗಳಲ್ಲಿ ಒಂದರ ಜೊತೆಗೆ ಇನ್ನೊಂದರ ಸಹಕಾರವಿಲ್ಲದಾಗಿದೆ. ಗಂಟಲು ಥೈರಾಯ್ಡ್ ಗ್ರಂಥಿಯ ಸ್ಥಾನವಾಗಿದ್ದು ಅದರ ಅಸಮತೆಯು ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತಿವೆ.
3. ಸೂಕ್ಷ್ಮ ಶರೀರದ {SUBTLE CHARACTERISTICS} ವಿಶೇಷ ಗುಣಗಳನ್ನು ಗಮನಿಸಿದಾಗ ಇದು ಮಾನಸಿಕ, ಙ್ಞಾನವಾಹಿನಿ ಮತ್ತು ಒಳ ಹೃದಯದ ಕಾರ್ಯದಲ್ಲಿ ಕ್ಷಮತೆ ಇಲ್ಲದಿರುವುದನ್ನು ಸೂಚಿಸುತ್ತದೆ. ವಿಶುದ್ಧ ಮತ್ತು ಅನಾಹತ ಚಕ್ರಗಳು ಸಾಗುತ್ತಿರುವ ಗತಿಯನ್ನು ಗಮನಿಸಿದಾಗ ಇದೇ ಪ್ರಧಾನ ಕಾರಣ ಎಂದು ಅರಿವಾಗುತ್ತದೆ.
4. ಮಾನವನು ಯವನ್ನಾವಸ್ಥೆಗೆಬಂದ ನಂತರ ಎಲ್ಲ ವಯೋಮಾನದಲ್ಲಿಯೂ ಸ್ತ್ರೀ-ಪುರುಷ ಬೇಧವಿಲ್ಲದೆ ಲೈಂಗಿಕತೆಯು ಪ್ರಕೃತ್ತಿದತ್ತವಾದ ಸ್ವಾಭಾವಿಕ ಕ್ರಿಯೆಯಾಗಿರುತ್ತದೆ. ಆದರೆ, ಕೆಲವರು ಪ್ರಕೃತ್ತಿದತ್ತ ಎಂಬ ಅಂಶವನ್ನು ಕಡೆಗಣಿಸಿ ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸುತ್ತಾರೆ, ಹೀಗಾಗಿ ಒಂದು ವಯೋಮಾನದ ನಂತರ ಇದರ ಆವಶ್ಯಕತೆ ಇಲ್ಲ / ಮಾಡಬಾರದು ಮುಂತಾಗಿ ಅರ್ಥೈಸ ತೊಡಗುತ್ತಾರೆ. ಇವೆಲ್ಲವೂ ಅವರ ಬಾಹ್ಯ ಮನಸ್ಸಿನ {CONSCIOUS} ಚಿಂತನೆಯಾಗಿರುತ್ತದೆ, ಆದರೆ ಅವರ ಅಂತರ ಮನಸ್ಸು {SUB-CONSCIOUS} ಇವರ ಈ ಚಿಂತನೆಯನ್ನು ಒಪ್ಪದೆ ತನಗೆ ಅದರ ಆವಶ್ಯಕತೆ ಇದೆ ಎಂದು ತರ್ಕಿಸುತ್ತದೆ, ಅದು ಸಿಗದಿದ್ದಾಗ ನಾನಾ ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇದು ಈಕೆಯ ಸಮಸ್ಯೆಗಳಿಗೆ ಕಾರಣೀಭೂತವಾಗಿದೆ.
5. ಸ್ಥೂಲ ಶರೀರದ ವಿಶೇಷ ಗುಣಗಳನ್ನು {PHYSICAL CHARACTERISTICS} ಗಮನಿಸಿದಾಗ ಪ್ರಾಣವಾಹಕ ನರಗಳು {CNS} ಸಕ್ರಮವಾಗಿ ಕಾರ್ಯ ನಿರ್ವಹಿಸದ ಕಾರಣ ಈಕೆಯ ಚಿಂತನೆಗಳು ಸಕಾರಾತ್ಮಕವಾಗಿರದೆ {POSITIVE} ನಕಾರಾತ್ಮಕವಾಗಿರುವ {NEGATIVE} ಈಕೆಯ ಚಿಂತನೆ ನಿದ್ರೆ ಮುಂತಾದ ಎಲ್ಲ ಕ್ರಿಯೆಗಳಲ್ಲಿ ವ್ಯತ್ಯಯವಾಗಿವೆ, ಅಂತೆಯೇ ಮಾಂಸ ಪೇಶಿಗಳಳಲ್ಲಿನ {MUSCULAR} ಅಸಮತೆ ಸ್ಥೂಲ ಮುಂತಾದ ಸಮಸ್ಯೆಗಳಿಗೆ ಕಾರಣೀಭೂತವಾಗಿದೆ.
6. ಸೂಕ್ಷ್ಮ ಶರೀರದ {SUBTLE BODY} ಅವಿಭಾಜ್ಯ ಅಂಗಗಳಾದ ಕುಂಡಲಿನಿ ಯೋಗಚಕ್ರಗಳೆಲ್ಲವೂ ನಿಗಿದಿತವಾದುದಕ್ಕಿಂತ ಅಧಿಕ {OVER ACTIVE} ಕೆಲಸ ಮಾಡುತ್ತಿರುವುದು, ಅಂತೆಯೇ ಇವುಗಳೊಂದಿಗೆ ಅನುಬಂಧ ಹೊಂದಿರುವ ಕಿರಣಗಳ ಕಾರ್ಯಕ್ಷಮತೆಯನ್ನು ಗಮನಿಸಿದರೆ ಈಗಾಗಲೇ ಚರ್ಚಿಸಿರುವ ಅಂಶಗಳೆಲ್ಲದರ ಪ್ರಭಾವವೂ ಯೋಗಚಕ್ರ ಮತ್ತು ಕಿರಣಗಳ ಮೇಲೆ ಆಗಿರುವುದನ್ನು ಎತ್ತಿ ತೋರಿಸುತ್ತಿದೆ. ಈ ಚಕ್ರಗಳೊಂದಿಗೆ ಅನುಬಂಧ ಹೊಂದಿರುವ ಕಾರಣ ನಿರ್ನಾಳ ಗ್ರಂಥಿಗಳ {ENDOCRINE} ಕಾರ್ಯಕ್ಷಮತೆ ಕುಗ್ಗಿದೆ.
7. ಸೂಕ್ಷ್ಮ ಶರೀರದ ಇನ್ನೊಂದು ಅತ್ಯಂತ ಗಹನವಾದ “ಮೆಂಟಲ್ ಬಾಡಿ”ಯು {MENTLE BODY} ಇಕ್ಕಟ್ಟಿನಲ್ಲಿ {CONGESTION} ಸಿಲುಕಿಕೊಂಡಿದ್ದು ತನ್ನ ಕಾರ್ಯ ನಿರ್ವಹಿಸಲಾರದಾಗಿದೆ ಕಾರಣ, ಮಾನಸಿಕ ಮತ್ತು ಸ್ಥೂಲ ಶರೀರದಲ್ಲಿ ಹೊಂದಾಣಿಕೆ ಇಲ್ಲದೆ “ಎತ್ತು ಏರಿಗೆ ಎಳೆಯಿತು, ಕೋಣ ನೀರಿಗೆ ಎಳೆಯಿತು” ಎಂಬ ಗಾದೆ ಮಾತಿನಂತಾಗಿದೆ.

ಚಿಕಿತ್ಸೆ ಮತ್ತು ಪರಿಣಾಮ :
ಈಗಾಗಲೇ ಮೇಲ್ಕಂಡ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಆಕೆಯ ಲೈಂಗಿಕತೆಯ ಬಗ್ಗೆ ಮತ್ತು ಜೀವನ ಶೈಲಿಯಲ್ಲಿ ಸೂಕ್ತ ಬದಲಾವಣೆಗಳನ್ನು ಸೂಚಿಸಿ ಯುಕ್ತವಾದ ಸಂಯೋಜನೆಯಲ್ಲಿ ರತ್ನೌಷಧಗಳು ಮತ್ತು ಆಯುರ್ವೇದ ಔಷಧಗಳನ್ನು ಕೊಡಲಾಯಿತು, ಕೇವಲ ಎರಡು ತಿಂಗಳ ಅವಧಿಯಲ್ಲಿ ಆಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದು ಮೇಲು ನೋಟಕ್ಕೇ ಕಂಡುಬರುತ್ತಿವೆ. ಪ್ರಧಾನವಾಗಿ ಆಕೆಯ ಮಾತಿನಲ್ಲಿ ಅತ್ಯಂತ ಸುಧಾರಣೆಗಳಾಗಿವೆ. ಸ್ಥೂಲತೆಯಲ್ಲಿಯೂ ಬದಲಾವಣೆಗಳು ಕಾಣುತ್ತಿವೆ. ಚಿಕಿತ್ಸೆ ಮುಂದುವರೆದಿವೆ.