ಹದಿನೆಂಟನೆಯ ಸಂಚಿಕೆ

ನನ್ನ ಮಾತು:
ಈ ಸಂಚಿಕೆಯಲ್ಲಿ ಮಧ್ಯವಯಸ್ಸಿನ ಪ್ರತಿಷ್ಠಿತ ಕಂಪನಿಯ ಜವಾಬ್ದಾರಿ ಸ್ಥಾನದಲ್ಲಿರುವ ಪುರುಷರೊಬ್ಬರು. ತಮಗೆ ನಾನಾ ವಿಧವಾದ ವಿನಾಷಕಾರಿ ಆರೋಗ್ಯದ ಸಮಸ್ಯೆಗಳಿದ್ದರೂ ಕುಡಿತದ ಚಟಕ್ಕೆ ದಾಸ್ಯರಾಗಿ ತಮ್ಮ ಸಮಸ್ಯೆಗಳನ್ನು ಮತ್ತಷ್ಟು ಜಟಿಲ ಗಳಿಸಿಕೊಂಡು ನಾನಾ ರೀತಿಯ ಕಷ್ಟ-ಕೋಟಲೆಗಳನ್ನು ಅನುಭವಿಸುತ್ತಿದ್ದಾರೆ. ಕುಡಿತದ ಚಟದಿಂದ ಏನೆಲ್ಲ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ಓದಿ, ಅರ್ಥೈಸಿ, ಬರೆಯಿರಿ.
ವೃತ್ತಿ ಧರ್ಮದಂತೆ ಇಲ್ಲಿ ವಿವರಿಸಿರುವ ರೋಗಿಗಳ ಪರಿಚಯವನ್ನು ಕೊಡಲಾಗುವುದಿಲ್ಲ.

ರೋಗಿ :
ಸುಮಾರು ಐವತ್ತೈದು ವರ್ಷ ವಯಸ್ಸಿನ ಪುರುಷರು. ಜವಾಬ್ದಾರಿಯುತ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು.

ಬಾಹ್ಯ ಲಕ್ಷಣಗಳು :
ಅಜೀರ್ಣ, ಅನಿದ್ರೆ, ಮಧುಮೇಹ {DIABETES}, ನರಮಂಡಲದ ಸಮಸ್ಯೆಗಳಿಂದ ನರಳುತ್ತಿದ್ದಾರೆ, ತನ್ನ ದೈನಂದಿನ ಚಟುವಟಿಕೆಗಳಲ್ಲಿ ನಿರಾಸಕ್ತಿ, ಮಧುಪಾನ ಮಾಡದಿದ್ದರೆ ತನಗೆ ಜೀವನವೇ ಇಲ್ಲ ನಿದ್ದೆ ಬರುವುದೇ ಇಲ್ಲ ಎಂಬ ಭಾವನೆಗಳಿಂದಾಗಿ ಖಿನ್ನತೆಗೆ ಜಾರುತ್ತಾರೆ, ಇತ್ಯಾದಿ.

ರೋಗ ನಿದಾನ ಮೆಡಿಕಲ್ ಡೌಸಿಂಗ್‍ನಿಂದ ಹೊರಬಂದ ಅಂಶಗಳು :
1. ರೋಗದ ಮೂಲಸ್ಥಾನವು ಗಂಟಲು ಮತ್ತು ಮನಸ್ಸಾಗಿದೆ {THROAT AND MIND}.
2. ಪಂಚತತ್ವಗಳಲ್ಲಿ ಜಲ ಮತ್ತು ವಾಯು, ಸಪ್ತಧಾತುಗಳಲ್ಲಿ ರಕ್ತ, ಮಾಂಸ ಮತ್ತು ಮೇದಗಳು, ತನ್ಮಾತ್ರೆಗಳಲ್ಲಿ ರಸ ಮತ್ತು ಗಂಧಗಳು ದುಷ್ಟಗೊಂಡಿವೆ.
3. ರೋಗವು ಮಾನಸಿಕ {MENTAL} ಮತ್ತು ಭಾವನಾತ್ಮಕ {EMOTIONAL} ಸ್ತರದಲ್ಲಿದೆ.
4. ಸೂಕ್ಷ್ಮ ಶರೀರದ {SUBTLE CHARACTERISTICS} ವಿಶೇಷ ಗುಣಗಳಲ್ಲಿ ಮಾನಸಿಕ {MENTAL} ಮತ್ತು ಙ್ಞಾನವಾಹಿನಿಯ {SENSORIUM} ಕಾರ್ಯಕ್ಷಮತೆ ಕುಂಠಿತಗೊಂಡಿವೆ.
5. ಸ್ಥೂಲ ಶರೀರದ {PHYSICAL CHARACTERISTICS} ವಿಶೇಷ ಗುಣಗಳಲ್ಲಿ ಪ್ರಾಣವಾಹಕ {CNS}, ನರಮಂಡಲ ಮತ್ತು ಮಾಂಸಪೇಶಿಗಳ {MUSCULAR SYSTEM} ಕಾರ್ಯವೈಖರಿಯು ಅಸಮರ್ಪಕವಾಗಿವೆ.
6. ಮಾನಸಿಕ {PSYCHOLOGICAL FACTORS} ನ್ಯೂನತೆಗಳನ್ನು ಗಮನಿಸಿದರೆ ಆಸೆ-ನಿರಾಸೆಗಳ {DESIRE-DISPAIR} ಮಧ್ಯೆ ತೂಗಾಡುತ್ತ ತನ್ನ ಆರೋಗ್ಯ, ಆರ್ಥಿಕ ಭದ್ರತೆ ಮತ್ತು ಭವಿಷ್ಯ ಜೀವನದ ಬಗ್ಗೆ ಚಿಂತಿಸುತ್ತಿವೆ.
7. ಸ್ಥೂಲ ಶರೀರದ ಪ್ರಧಾನ ಭಾಗವಾದ ಕುಂಡಲಿನಿ ಯೋಗಚಕ್ರಗಳಾದ ಸಹಸ್ರಾರ, ಆಙ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾಧಿಸ್ತಾನ ಮತ್ತು ಮೂಲಾಧಾರ ಚಕ್ರಗಳೆಲ್ಲವೂ ತಮಗೆ ನಿಗದಿತವಾದುದಕ್ಕಿಂತಲೂ ಅಧಿಕವಾಗಿ ಕೆಲಸ {OVER ACTIVE} ಮಾಡುತ್ತ ದುಷ್ಟಗೊಂಡಿವೆ, ಇವುಗಳೊಂದಿಗೆ ಅನುಬಂಧ ಹೊಂದಿರುವ ಕಿರಣಗಳು {RAYS} ಸಹ ಅನಿಯಮಿತವಾಗಿ ಕೆಲಸ ಮಾಡುತ್ತಿವೆ. ಸೂಕ್ಷ್ಮ ಶರೀರದ ಮತ್ತೊಂದು ಭಾಗವಾದ ಮಾನಸಿಕ {MENTAL}, ಭಾವನಾತ್ಮಕ {ASTRAL} ಮತ್ತು ಈಥೆರಿಕ್ {ETHERIC} ಶರೀರಗಳೆಲ್ಲವೂ ಇಕ್ಕಟ್ಟಿನಲ್ಲಿ {CONJESTION} ಸಿಲುಕಿಕೊಂಡು ತಮ್ಮ ನಿಗದಿತ ಕಾರ್ಯವನ್ನು ಸಮರ್ಥವಾಗಿ ಮಾಡಲಾರದಾಗಿವೆ. ಇದರಿಂದಾಗಿ
1. ಮಾನಸಿಕ-ಭಾವನಾತ್ಮಕ ಬಾಡಿಗಳಲ್ಲಿ {MENTAL-ASTRAL}
2. ಮಾನಸಿಕ-ಶಾರೀರಕ ಬಾಡಿಗಳಲ್ಲಿ {MENTAL-PHYSICAL}
3. ಮಾನಸಿಕ-ಈಥೆರಿಕ್ ಬಾಡಿಗಳಲ್ಲಿ {MENTAL-ETHERIC} ಇರಬೇಕಾದ ಸಹಕಾರ {CO-ORDINATION} ಇಲ್ಲದೆ, ನಮ್ಮಲ್ಲಿ ಪ್ರಚಲಿತದಲ್ಲಿರುವ “ಎತ್ತು ಏರಿಗೆ ಎಳೆಯಿತು, ಕೋಣ ನೀರಿಗೆ ಎಳೆಯಿತು” ಎಂಬಂತಾಗಿದೆ.

ವಿಶ್ಲೇಷಣೆ :
1. ರೋಗದ ಮೂಲ ಸ್ಥಾನವು ಗಂಟಲು ಮತ್ತು ಮನಸ್ಸಾಗುರುವುದನ್ನು, ಪಂಚತತ್ವಗಳಲ್ಲಿ ಜಲ ಮತ್ತು ವಾಯುಗಳು ದುಷ್ಟಗೊಂಡಿರುವುದು ಸಮರ್ಥಿಸುತ್ತಿದೆ, ಅಂತೆಯೇ ಸಪ್ತಧಾತುಗಳಲ್ಲಿ ರಕ್ತ, ಮಾಂಸ ಮತ್ತು ಮೇದಗಳು ದುಷ್ಟಗೊಂಡಿವೆ. ತನ್ಮಾತ್ರೆಗಳಲ್ಲಿ {RUDIMENTS} ರಸವು ಜೀರ್ಣಕ್ರಿಯೆಯಲ್ಲಿರುವ ನ್ಯೂನತೆಯನ್ನು ಸಮರ್ಥಿಸುತ್ತಿದೆ, ಅಂತೆಯೇ ಈತನಿಗಿರುವ ಪರಿಪೂರ್ಣ ಆರೋಗ್ಯ, ಭವಿಷ್ಯ ಜೀವನದಲ್ಲಿ ಅಭಿವೃದ್ಧಿ, ಮುಂತಾದ ವಿಷಯಗಳ ಕಾಮನೆಯನ್ನು ಗಂಧ ತನ್ಮಾತ್ರೆಯು ಸಮರ್ಥಿಸುತ್ತಿದೆ.
2. ರೋಗವು ಮಾನಸಿಕ {MENTAL} ಮತ್ತು ಭಾವನಾತ್ಮಕ {EMOTIONAL} ಸ್ತರದಲ್ಲಿರುವುದನ್ನು ಗಮನಿಸಿದಾಗ ಈತನಲ್ಲಿ ಇರಬಹುದಾದ ಸಾಂಸಾರಿಕ / ಆರ್ಥಿಕ ವಿಷಯದ ಸಮಸ್ಯೆಗಳನ್ನು ಚಾಕ-ಚಕ್ಯತೆಯಿಂದ ಅರ್ಥೈಸಿ ನಿವಾರಿಸಿಕೊಳ್ಳುವ ಬದಲು ಪಲಾಯನ ವಾದವನ್ನು ಅನುಸರಿಸಿ, ಕುಡಿತದ ಮೊರೆಹೋಗಿದ್ದಾರೆ. ಇದರಿಂದಾಗಿ ಸ್ಥೂಲ ಶರೀರದ {PHYSICAL CHARACTERISTICS} ವಿಶೇಷ ಗುಣಗಳಲ್ಲಿ ಕಂಡುಬರುವಂತೆ ಪ್ರಾಣವಾಹಕ {CNS}, ನರಮಂಡಲದಲ್ಲಿ ವ್ಯತ್ಯಯ ಉಂಟಾಗಿ ಅದು ಮಾಂಸಪೇಶಿಗಳ {MUSCULAR SYSTEM} ಮೇಲೂ ತನ್ನ ದುಷ್ಪರಿಣಾಮ ಬೀರಿದೆ, ಅಲ್ಲದೆ ಸೂಕ್ಷ್ಮ ಶರೀರದ {SUBTLE CHARACTERISTICS} ವಿಶೇಷ ಗುಣಗಳ ಮೇಲೂ ಪ್ರಭಾವ ಬೀರಿ ಈತನ ಆಲೋಚನಾ ಶಕ್ತಿ ಮತ್ತು ಙ್ಞಾನವಾಹಿನಿಗಳ ಕಾರ್ಯಕ್ಷಮತೆಯು ಹಾಳಾಗಿವೆ. ಇವುಗಳಿಂದಾಗಿಯೇ ಈತನು ಆಸೆ-ನಿರಾಸೆಗಳ {DESIRE-DISPAIR} ಮಧ್ಯೆ ತೂಗಾಡುತ್ತ ದಿನದಿಂದ ದಿನಕ್ಕೆ ಸಮಸ್ಯೆಗಳ ಗೂಡಾಗುತ್ತಿದ್ದಾನೆ.
3. ಈಗಾಗಲೇ ವಿಶ್ಲೇಷಿಸಿರುವ ಕಾರಣಗಳೊಂದಿಗೆ ಸೂಕ್ಷ್ಮ ಶರೀರದ ಅತ್ಯಂತ ಪ್ರಭಾವಿ ಕೇಂದ್ರವಾದ ಕುಂಡಲಿನಿ ಯೋಗಚಕ್ರಗಳಾದ ಸಹಸ್ರಾರ, ಆಙ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾಧಿಸ್ತಾನ ಮತ್ತು ಮೂಲಾಧಾರ ಚಕ್ರಗಳೆಲ್ಲವೂ ತಮಗೆ ನಿಗದಿತವಾದುದಕ್ಕಿಂತಲೂ ಹೆಚ್ಚಿನ ಕೆಲಸ ಮಾಡುವ ಮೂಲಕ ತಮ್ಮ ಕಾರ್ಯಸಾಮರ್ಥ್ಯವನ್ನು ಕಳೆದುಕೊಂಡಿವೆ, ಇದರಿಂದಾಗಿಯೇ ಇವುಗಳ ಅನುಬಂಧಿಯಾದ ಕಿರಣಗಳು {RAYS} ಸಹ ಸಮರ್ಥವಾಗಿ ಕೆಲಸ ಮಾಡುತ್ತಿಲ್ಲವಾಗಿದೆ.
4. ಸೂಕ್ಷ್ಮ ಶರೀರದ ಮತ್ತೊಂದು ಭಾಗವಾದ ಮೆಂಟಲ್ ಬಾಡಿ {MENTAL}, ಆಸ್ತ್ರಲ್ ಬಾಡಿ {ASTRAL} ಮತ್ತು ಈಥೆರಿಕ್ ಬಾಡಿಗಳೆಲ್ಲವೂ {ETHERIC} ಇಕ್ಕಟ್ಟಿನಲ್ಲಿ {CONJESTION} ಸಿಲುಕಿಕೊಂಡು ತಮ್ಮ ತಮ್ಮ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲಾಗದೆ ಮೆಂಟಲ್-ಆಸ್ತ್ರಲ್, ಮೆಂಟಲ್-ಫಿಸಿಕಲ್ ಮತ್ತು ಮೆಂಟಲ್-ಈಥೆರಿಕ್ ಬಾಡಿಗಳಲ್ಲಿ ಪರಸ್ಪರ ಹೊಂದಾಣಿಕೆ {CO-ORDINATION} ಇಲ್ಲದಂತಾಗಿ ಸಕ್ರಮವಾಗಿ ಕೆಲಸ ಮಾಡುವ ಬದಲು ತಮಗಿಷ್ಟ ಬಂದಂತೆ ಕೆಲಸ ಮಾಡತೊಡಗಿವೆ.

ಚಿಕಿತ್ಸೆ ಮತ್ತು ಪರಿಣಾಮ :
ಮೇಲ್ಕಂಡ ಎಲ್ಲ ಅಂಶಗಳನ್ನು ಕೂಲಂಕಶವಾಗಿ ವಿಮರ್ಶಿಸಿ ಪರಿಪೂರ್ಣ {HOLISTIC} ಚಿಕಿತ್ಸೆಯನ್ನು ಆಯೋಜಿಸಿ ದಿವ್ಯ ರತ್ನೌಷಧಗಳನ್ನು ವಿಶೇಷವಾಗಿ ಸಂಯೋಜಿಸಿ ವಿಶಿಷ್ಟವಾದ ಆಯುರ್ವೇದ ಔಷಧಗಳೊಂದಿಗೆ ಕೊಡಲಾಯಿತು, ಇದರೊಂದಿಗೆ ಅವರ ಜೀವನ ಶೈಲಿಯಲ್ಲಿದ್ದ ನ್ಯೂನತೆಗಳನ್ನು ಎತ್ತಿ ತೋರಿಸಿ ಅವರ ಶೈಲಿಯಲ್ಲಿ ಸೂಕ್ತ ಪರಿವರ್ತನೆಯನ್ನು ಮಾಡಲಾಯಿತು. ಆಶ್ಚರ್ಯಕರ ರೀತಿಯಲ್ಲಿ ಕೇವಲ 30-40 ದಿನಗಳಲ್ಲಿ ಸಾಕಷ್ಟು ಪರಿವರ್ತನೆಗೊಂಡು ಮದಿರಾಪಾನವಿಲ್ಲದೆ ಸುಖ ನಿದ್ರೆ ಮಾಡಲಾರಂಭಿಸಿದರು. ಇದರ ಪರಿಣಾಮ ಅವರ ಇನ್ನಿತರ ಕಾರ್ಯಗಳಲ್ಲಿ ಅವರಿಗೇ ಆತ್ಮಸ್ಥೈರ್ಯ ಬಂದಿದೆ, ಜೀವನವನ್ನು ಧೈರ್ಯವಾಗಿ ಎದುರಿಸುವ ಮನೋಭಾವ ಉಂಟಾಗಿದೆ. ಚಿಕಿತ್ಸೆಯು ಮುಂದುವರೆಯುತ್ತಿದೆ.