ಇಪ್ಪತ್ತನೆಯ ಸಂಚಿಕೆ

ನನ್ನ ಮಾತು :
ಕಳೆದ ಸಂಚಿಕೆಯಲ್ಲಿ ಬರೆದಿದ್ದ ಒಬ್ಬ ಪುರುಷನ ಸಮಸ್ಯೆಗಳಂತಹುದೇ ಸಮಸ್ಯೆಗಳನ್ನು ಒಬ್ಬ ವಿವಾಹಿತ ಸ್ತ್ರೀ ಅನುಭವಿಸಿ ಅದರಿಂದ ಮುಕ್ತಳಾಗಿ ಜೀವನದಲ್ಲಿ ಉನ್ನತಿಗೆ ಬಂದದ್ದನ್ನು ಬರೆಯುವುದಾಗಿ ತಿಳಿಸಿದ್ದೆ, ಈಗ ಅದು ನಿಮ್ಮ ಮುಂದಿದೆ. ಓದಿ, ಅರ್ಥೈಸಿ, ಬರೆಯಿರಿ.
ವೃತ್ತಿ ಧರ್ಮದಂತೆ ಇಲ್ಲಿ ವಿವರಿಸಿರುವ ರೋಗಿಗಳ ಪರಿಚಯವನ್ನು ಕೊಡಲಾಗುವುದಿಲ್ಲ.

ರೋಗಿ :
ಇಪ್ಪತ್ತೇಳು ವರ್ಷ ವಯೋಮಾನದ ವಿವಾಹಿತ ಮಹಿಳೆ ಇನ್ನೂ ಸಂತಾನವಾಗಿಲ್ಲ.

ಬಾಹ್ಯ ಲಕ್ಷಣಗಳು :
ಜೀರ್ಣಕ್ರಿಯೆಯಲ್ಲಿ ತೊಂದರೆ, ತಲೆನೋವು, ಋತುಚಕ್ರದಲ್ಲೂ ಸಮಸ್ಯೆಗಳು, ಎರಡೂ ಕಾಲಿನಲ್ಲಿ ಉಬ್ಬಿದ ನರಗಳು {VARICOSIS VEINS}, ವೃತ್ತಿಯಲ್ಲಿ ಅರಿವಿನ ಕೊರತೆ, ಜೀವನದಲ್ಲಿ ನಿರಾಸಕ್ತಿ, ವಿಪರೀತ ಕೂದಲು ಉದುರುತ್ತಿವೆ.

ರೋಗ ನಿದಾನ ಮೆಡಿಕಲ್ ಡೌಸಿಂಗ್‍ನಿಂದ ಹೊರಬಂದ ಅಂಶಗಳು :
1. ರೋಗದ ಮೂಲಸ್ಥಾನವು ಮನಸ್ಸು {MIND} ಮತ್ತು ಹೊಟ್ಟೆಯಾಗಿವೆ {OBDEMEN}.
2. ಪಂಚತತ್ವಗಳಲ್ಲಿ ಜಲ, ಅಗ್ನಿ, ವಾಯುಗಳು ದುಷ್ಟಗೊಂಡಿವೆ. ಸಪ್ತಧಾತುಗಳಲ್ಲಿ ರಕ್ತ ಮತ್ತು ಮಜ್ಜಾಗಳು ದೂಷಿತಗೊಂಡಿವೆ, ರಸ ತನ್ಮಾತ್ರೆಯು ಇವುಗಳಿಗೆ ಇಂಬುಗೊಡುತ್ತಿದೆ.
3. ತ್ರಿದೋಷಗಳೆಲ್ಲವು {ವಾತ, ಪಿತ್ತ, ಕಫ} ದೂಷಿತಗೊಂಡಿವೆ, ಅಂತೆಯೇ ತ್ರಿಗುಣಗಳಾದ ಸತ್ವ, ರಜೋ ಮತ್ತು ತಮೋ ಗುಣಗಳಲ್ಲಿ ಈಕೆಯು ರಜೋ ಮತ್ತು ತಮೋ ಗುಣಗಳಿಂದ ಕೂಡಿರುತ್ತಾಳೆ.
4. ರೋಗವು ಭಾವನಾತ್ಮಕ ಮತ್ತು ಭೌಧ್ಯಾತ್ಮಕ {EMOTIONAL/ASTRAL AND INTUTIONAL} ಸ್ತರದಲ್ಲಿದೆ.
5. ಸೂಕ್ಷ್ಮ ಶರೀರದ ವಿಶೇಷ ಗುಣಗಳಲ್ಲಿ {SUBTLE CHARACTERISTICS} ಚೇತನ {VITAL LIFE} ಮತ್ತು ಮಾನಸಿಕ ಜೀವನದಲ್ಲಿ {MENTAL LIFE} ನ್ಯೂನತೆ, ಅಂತೆಯೇ, ಸ್ಥೂಲ ಶರೀರದ ವಿಶೇಷ ಗುಣಗಳಲ್ಲಿ {PHYSICAL CHARACTERISTICS} ನಮ್ಮಲ್ಲಿರುವ 72,000 ನರಮಂಡಲದಲ್ಲೂ ಕಾರ್ಯವೈಫಲ್ಯ {IMBALANCE} ಉಂಟಾಗಿದೆ.
6. ಮಾನಸಿಕ ನ್ಯೂನತೆಯ {PSYCHOLOGICAL FACTORS} ಅಂಶಗಳನ್ನು ಗಮನಿಸಿದಾಗ ಆತಂಕ ಮತ್ತು ಆಸೆಗಳು {ANXIETY AND DESIRE} ತನ್ನ ಆರೋಗ್ಯ, ವೃತ್ತಿ ಜೀವನ, ದಾಂಪತ್ಯ, ಆರ್ಥಿಕ ಸ್ಥಿತಿಗಳ ಬಗ್ಗೆ ಗೊಂದಲಗೊಂಡಿದೆ.
7. ಕುಂಡಲಿನಿ ಯೋಗಚಕ್ರಗಳಾದ ಸಹಸ್ರಾರ, ಆಙ್ಞ, ವಿಶುದ್ಧ, ಅನಾಹತ, ಮಣಿಪುರ, ಪ್ಲೀಹ {SPLEEN}, ಸ್ವಾದಿಸ್ತಾನ ಮತ್ತು ಮೂಲಾಧಾರಗಳಲ್ಲಿ ಸಹಸ್ರಾರ, ಅನಾಹತ ಮತ್ತು ಪ್ಲೀಹಗಳು {SPLEEN} ಕ್ರಮಬದ್ಧವಾಗಿವೆ. ಮಣಿಪುರ ಚಕ್ರವು ತನಗೆ ನಿಗದಿತವಾದ ಕೆಲಸವನ್ನು ಮಾಡದೆ ಅತಿ ಕಡಿಮೆ ಕೆಲಸ {UNDER ACTIVE} ಮಾಡುತ್ತಿದೆ. ಇನ್ನುಳಿದ ಆಙ್ಞ, ವಿಶುದ್ಧ, ಸ್ವಾದಿಸ್ಥಾನ ಮತ್ತು ಮೂಲಾಧಾರ ಚಕ್ರಗಳು ಅತಿ ಹೆಚ್ಚು ಕೆಲಸ {OVER ACTIVE} ಮಾಡುತ್ತ ಸಮಸ್ಯೆಗಳಿಗೆ ಇಂಬು ಕೊಟ್ಟಿವೆ.

ವಿಶ್ಲೇಷಣೆ :
1. ರೋಗದ ಮೂಲಸ್ಥಾನವು ಮನಸ್ಸು {MIND} ಮತ್ತು ಹೊಟ್ಟೆಯಾಗಿರುವುದನ್ನು {OBDEMEN} ಗಮನಿಸಿದಾಗ ಈಕೆಯಲ್ಲಿರುವ ಜೀರ್ಣಕ್ರಿಯೆ, ತಲೆನೋವು, ಮಾಸಿಕ ಧರ್ಮದಲ್ಲಿ ಅಡಚಣೆಯು ಸ್ವಾಭಾವಿಕವಾಗಿ ಇದ್ದೇ ಇರುತ್ತದೆ.
2. ಪಂಚತತ್ವಗಳಲ್ಲಿ ಜಲ, ಅಗ್ನಿಗಳು ದುಷ್ಟಗೊಂಡಿರುವುದನ್ನು ಗಮನಿಸಿದಾಗ ಜಲ ತತ್ವದಿಂದ ರಕ್ತ ಧಾತುವು, ಅಗ್ನಿ ತತ್ವದಿಂದ ಈಕೆಯು ಸೇವಿಸಿದ ಅನ್ನ-ಪಾನಾದಿಗಳೂ ಕ್ರಮಬದ್ಧವಾದ ರೀತಿಯಲ್ಲಿ ಜೀರ್ಣವಾಗದೆ ಸ್ಥೂಲ ಶರೀರದ ಪೋಷಣೆಯಲ್ಲಿ ಕುಂದುಂಟಾಗಿದೆ, ಅಂತೆಯೇ ವಾಯು ತತ್ವವು ದುಷ್ಟಗೊಂಡಿರುವ ಕಾರಣ ಮಜ್ಜಾ ಧಾತುವು ದೂಷಿತಗೊಂಡು ನರಮಂಡಲದ ಕಾರ್ಯಕ್ಷಮತೆಯನ್ನು ಕುಗ್ಗಿಸಿದೆಯಾದ ಕಾರಣ 72,000 ನರಮಂಡಲದಲ್ಲಿಯೂ ನ್ಯೂನತೆ ಉಂಟಾಗಿ ಕಾಲಿನ ಭಾಗದ ನರಗಳ {VARICOSE VEINS} ಮುಖಾಂತರ ತನ್ನ ದುಷ್ಟತೆಯನ್ನು ಪ್ರದರ್ಶಿಸುತ್ತಿದೆ. ಇದಕ್ಕೆ ರಸತನ್ಮಾತ್ರೆಯು ಇಂಬನ್ನು ಕೊಡುತ್ತಿದೆ.
3. ಈಕೆಯಲ್ಲಿ ತ್ರೀದೋಷಗಳಾದ ವಾತ-ಪಿತ್ತ-ಕಫಗಳೆಲ್ಲವೂ ದೂಷಿತಗೊಂಡು ಕಾಲಾನುಸಾರವಾಗಿ ಸಮಸ್ಯೆಗಳನ್ನು ನಿರ್ಮಿಸುತ್ತಿವೆ, ಇವಕ್ಕೆ ತ್ರಿಗುಣಗಳಾದ ಸತ್ವ, ರಜೋ, ತಮೋ ಗುಣಗಳಲ್ಲಿ ಪ್ರಧಾನವಾಗಿ ರಜೋ ಮತ್ತು ತಮೋ ಗುಣಗಳು ಸಮಸ್ಯೆಗಳನ್ನು ಇಮ್ಮಡಿಗೊಳಿಸುತ್ತಿವೆ.
4. ರೋಗವು ಭಾವನಾತ್ಮಕ ಮತ್ತು ಭೌಧ್ಯಾತ್ಮಕ {EMOTIONAL/ASTRAL AND INTUTIONAL} ಸ್ತರದಲ್ಲಿರುವುದನ್ನು ಗಮನಿಸಿದಾಗ ಈಕೆಯು ತನ್ನ ನಿಜಜೀವನದಲ್ಲಿ ಉಂಟಾಗಬಹುದಾದ ಏರಿಳಿತಗಳನ್ನು ಸೂಕ್ತವಾಗಿ ಅರ್ಥೈಸಿ ಅದಕ್ಕೆ ಹೊಂದಿಕೊಳ್ಳಲಾರದಾಗಿದ್ದಾಳೆ. ಅಂತೆಯೇ ಈಕೆಯ ಅಂತಃಸತ್ವವು {BIO METRIC} 380 ಅಂಕಗಳಿಂದ ಕೂಡಿದ್ದು ಬಹಳ ಮೇಧಾವಿಯಾಗಿದ್ದರೂ ಅದರ ಉಪಯೋಗವನ್ನು ಕೇವಲ ಶೇಕಡ 15 ರಷ್ಟನ್ನು ಮಾತ್ರ ಉಪಯೋಗಿಸುತ್ತಿದ್ದಾರಾದ ಕಾರಣ ತಮ್ಮ ವೃತ್ತಿಜೀವನದಲ್ಲಿ ಹಿಂದೆ ಬಿದ್ದಿದ್ದು ಮೇಲ್ಮಟ್ಟಕ್ಕೆ ಹೋಗಲಾರದಾಗಿದ್ದಾಳೆ.
5. ಸೂಕ್ಷ್ಮ ಶರೀರದ ವಿಶೇಷ ಗುಣಗಳಲ್ಲಿ {SUBTLE CHARACTERISTICS} ಚೇತನ {VITAL} ಮತ್ತು ಮಾನಸಿಕ {MENTAL} ಗುಣಗಳ ಕಾರ್ಯನಿರ್ವಹಣೆಯಲ್ಲಿ ಕುಂದುಂಟಾಗಿದೆ ಅಂತೆಯೇ ಸ್ಥೂಲ ಶರೀರದ ವಿಶೇಷ ಗುಣಗಳಲ್ಲಿ {PHYSICAL CHARACTERISTICS} ನಮ್ಮಲ್ಲಿರುವ 72,000 ನರಮಂಡಲದ ಕಾರ್ಯಕ್ಷಮತೆಯಲ್ಲಿ ವೈಫಲ್ಯ ಉಂಟಾಗಿ ಅಸಮರ್ಪಕ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
6. ಮಾನಸಿಕ {PSYCHOLOGICAL FACTORS} ಅಂಶಗಳನ್ನು ಗಮನಿಸಿದಾಗ ಆತಂಕ ಮತ್ತು ಆಸೆಗಳು {ANXIETY AND DESIRE} ತೂಗುಯ್ಯಾಲೆಯಾಡುತ್ತ ತನ್ನ ಆರೋಗ್ಯ, ದಾಂಪತ್ಯ ಜೀವನ, ವೃತ್ತಿ ಜೀವನ ಮತ್ತು ಆರ್ಥಿಕ ಸ್ಥಿರತೆಗಳ ಬಗ್ಗೆ ಗೊಂದಲಗೊಂಡಿರುವುದನ್ನು ಗಮನಿಸಿದಾಗ ನಾನಾ ಸಮಸ್ಯೆಗಳನ್ನುಂಟು ಮಾಡುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಇದರಿಂದಾಗಿ ಈಕೆಯು ಎಷ್ಟೇ ಮೇಧಾವಿಯಾಗಿದ್ದರೂ ತನ್ನಲ್ಲಿರುವ ಅಂತಃಸತ್ವವನ್ನು {BIO METRIC} ಸೂಕ್ತವಾಗಿ ಬಳಸಿಕೊಳ್ಳಲಾರದಾಗಿದ್ದಾಳೆ.
7. ಇನ್ನು ಸೂಕ್ಷ್ಮ ಶರೀರದ ಪ್ರಮುಖ ಭಾಗವಾದ ಶ್ರೀ ಶ್ರೀ ಪತಂಜಲೀ ಮಹರ್ಷಿಗಳಿಂದ ಪ್ರಣೀತವಾದ ಕುಂಡಲಿನಿ ಯೋಗಚಕ್ರಗಳ ಬಗ್ಗೆ ವಿಮರ್ಷಿಸೋಣ. ಸಹಸ್ರಾರ, ಆಙ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾದಿಸ್ತಾನ ಮತ್ತು ಮೂಲಾಧಾರಗಳೆಂದು ಏಳು ಚಕ್ರಗಳಿರುತ್ತವೆ, ಪಾಶ್ಚ್ಯಾತ್ಯ ವಿದ್ವಾಂಸರು ಸ್ಥೂಲ ಶರೀರದ ಭಾಗವಾದ ಪ್ಲೀಹವನ್ನು {SPLEEN} ಅದು ಸ್ಥೂಲ ಶರೀರದಿಂದ ಸೂಕ್ಷ್ಮ ಶರೀರದ ಕಡೆಗೆ ನಿರ್ವಹಿಸುವ ಕಾರ್ಯಕ್ಷಮತೆಯಿಂದ ಒಂದು ಚಕ್ರಾ ಎಂದು ಪರಿಗಣಿಸಿರುತ್ತಾರೆ (ಈ ಲೇಖಕರೂ ಇದೇ ಸಿದ್ಧಾಂತವನ್ನು ಅನುಸರಿಸುತ್ತಿದ್ದಾರೆ). ಈ ಎಂಟೂ ಚಕ್ರಗಳಲ್ಲಿ ಸಹಸ್ರಾರ, ಅನಾಹತ ಮತ್ತು ಪ್ಲೀಹಗಳು {SPLEEN} ಆರೋಗ್ಯದಿಂದ ಕೂಡಿರುತ್ತವೆ. ಮಣಿಪುರ ಚಕ್ರವು ತನಗೆ ನಿಗದಿತವಾದ ಕೆಲಸವನ್ನು ಮಾಡದೆ ಅತಿ ಕಡಿಮೆ ಕೆಲಸ {UNDER ACTIVE} ಮಾಡುತ್ತ ಜೀರ್ಣಾಂಗ ಸಮಸ್ಯೆಯನ್ನು ಉಂಟು ಮಾಡುತ್ತಿದೆ. ಇನ್ನುಳಿದ ಆಙ್ಞ, ವಿಶುದ್ಧ, ಸ್ವಾದಿಸ್ತಾನ ಮತ್ತು ಮೂಲಾಧಾರ ಚಕ್ರಗಳು ಅತಿ ಹೆಚ್ಚು ಕೆಲಸ {OVER ACTIVE} ಮಾಡುತ್ತ ಸಮಸ್ಯೆಗಳ ಆಗರವಾಗಿರುತ್ತವೆ.
8. ಅಂತೆಯೇ, ಭಾವನಾತ್ಮಕ ಶರೀರವು {EMOTIONAL/ASTRAL} ದುಷ್ಟಗೊಂಡಿದ್ದು ತಾನು ಸಹಕರಿಸಬೇಕಾದ ಮಾನಸಿಕ ಶರೀರದೊಂದಿಗೆ {MENTAL BODY} ಸಹಕರಿಸದೆ {LACK OF CO-ORDINATION} ನಾನಾ ಸಮಸ್ಯೆಗಳನ್ನು ಉಂಟುಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.

ಚಿಕಿತ್ಸೆ ಮತ್ತು ಪರಿಣಾಮ :
ಈ ಮೇಲ್ಕಂಡ ಎಲ್ಲ ಅಂಶಗಳನ್ನು ಕೂಲಂಕಶವಾಗಿ ಪರಿಶೀಲಿಸಿ, ವಿಮರ್ಶಿಸಿ ಪರಿಪೂರ್ಣ {HOLISTIC} ಚಿಕಿತ್ಸೆಯನ್ನು ಆಯೋಜಿಸಿ ಈಕೆಯ ದಿನಚರಿಯಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಯಿತು ಅಂತೆಯೇ ದಿವ್ಯ ರತ್ನೌಷಧಗಳನ್ನು ವಿಶಿಷ್ಟ ರೀತಿಯಲ್ಲಿ ಸಂಯೋಜಿಸಿ ಸೂಕ್ತ ಆಯುರ್ವೇದ ಔಷಧಗಳೊಂದಿಗೆ ಸುಮಾರು ಆರು ತಿಂಗಳ ಕಾಲ ನಡೆಸಿದ ಚಿಕಿತ್ಸೆಯು ಅತ್ಯಂತ ಫಲಕಾರಿಯಾಗಿ ಆಕೆಯ ದೈಹಿಕ, ಮಾನಸಿಕ ಆರೋಗ್ಯವು ಗಣನೀಯ ರೀತಿಯಲ್ಲಿ ಸುಧಾರಿಸಿತು. ಅನಿರೀಕ್ಷಿತವಾಗಿ ಈಕೆಯು ಕೆಲಸ ಮಾಡುತ್ತಿದ್ದ ಸಂಸ್ಥೆಯವರು ವಿದೇಶದಲ್ಲಿರುವ ತಮ್ಮ ಕಚೇರಿಗೆ ಸಿಬ್ಬಂದಿಗಾಗಿ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಈಕೆಯು ಅತ್ಯುನ್ನತ ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನದಲ್ಲಿ ಹೊರಹೊಮ್ಮಿದರು. ಇದರಿಂದಾಗಿ ಸಂಸ್ಥೆಯವರು ಈಕೆಗೆ 1-2 ವರ್ಷ ಕಾಲ ವಿದೇಶದಲ್ಲಿ ಕಾರ್ಯನಿರ್ವಹಣೆ ಮಾಡುವ ಮಹತ್ತರ ಜವಾಬ್ದಾರಿ ಮತ್ತು ಅದಕ್ಕೆ ತಕ್ಕಂತಹ ಸ್ಥಾನ-ಮಾನಗಳನ್ನು ಕೊಟ್ಟು ಕಳುಹಿಸಿದರು. ಈಗ ಈಕೆಯು ದಕ್ಷತೆಯಿಂದ ಅಲ್ಲಿ ಕೆಲಸ ಮಾಡುತ್ತ ನೆಮ್ಮದಿಯ ಜೀವನ ನಡೆಸುತ್ತಿದ್ದಾಳೆ.