ಇಪ್ಪತ್ತೆರಡನೆಯ ಸಂಚಿಕೆ

ನನ್ನ ಮಾತು :
ಈ ಸಂಚೆಕೆಯಲ್ಲಿ ಒಬ್ಬ ವಿದ್ಯಾರ್ಥಿಯು ಅಪಸ್ಮಾರ {EPILEPSY} ಲಕ್ಷಣಗಳಿಂದ ನರಳುತ್ತಿರುವುದನ್ನು ಬರೆಯುತ್ತಿದ್ದೇನೆ, ಇದು ಮೇಲು ನೋಟಕ್ಕೆ ಅಪಸ್ಮಾರ {EPILEPSY} ಲಕ್ಷಣಗಳಿಂದ ಕೂಡಿದ್ದರೂ ಇದು ಅಪಸ್ಮಾರವಲ್ಲ. ಇದಕ್ಕೆ ಕಾರಣಗಳೇನೆಂದರೆ ಮೂರು ವರ್ಷಗಳ ಹಿಂದೆ ಈತನಲ್ಲಿ ಇಂತಹದೇ ಲಕ್ಷಣಗಳು ಕಾಣಿಸಿಕೊಂಡಿದ್ದು ಸೂಕ್ತ ಪರಿಪೂರ್ಣ ಚಿಕಿತ್ಸೆಯನ್ನು ನೀಡಿದ ನಂತರ ಈ ಲಕ್ಷಣಗಳಿಂದ ಗುಣಮುಖನಾಗಿದ್ದ. ಕಾರಣಾಂತರಗಳಿಂದ ಚಿಕಿತ್ಸೆಯನ್ನು ನಿಲ್ಲಿಸಲಾಗಿತ್ತು. ಈತನು ಅತ್ಯಂತ ಮೇಧಾವಿ ವಿದ್ಯಾರ್ಥಿ, ಅತ್ಯುನ್ನತ ಅಂಕಗಳನ್ನು ಗಳಿಸಿ ಹೆಸರಾಂತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸಿರುತ್ತಾನೆ. ಪೋಷಕರಿಗೆ ಈತನು ಇನ್ನೂ ಉನ್ನತ ಮಟ್ಟದ ಅಂಕಗಳನ್ನು ಗಳಿಸಬೇಕೆಂಬ ಹಂಬಲದಿಂದ ಓದಿನ ಬಗ್ಗೆ ಹೇರುತ್ತಿರುವ ಒತ್ತಡವನ್ನು ತಾಳಿಕೊಳ್ಳಲಾರದೆ ಇತ್ತೀಚಿಗೆ ಹಿಂದಿನ ಲಕ್ಷಣಗಳೆಲ್ಲವೂ ಕಂಡುಬಂದಿತು. ಆದ ಕಾರಣ ಕೂಲಂಕಷವಾಗಿ ಮೆಡಿಕಲ್ ಡೌಸಿಂಗ್ ಮುಖಾಂತರ ಒಳಗೆ ಹುದುಗಿದ್ದ ರೋಗಕಾರಕಗಳನ್ನು ಮತ್ತು ಕಿರ್ಲಿಯನ್ ಫೋಟೋ ಮುಖಾಂತರ ತೆಗೆದ ಚಿತ್ರಗಳಿಂದ ಸೂಕ್ಷ್ಮ ಶರೀರದಲ್ಲಿ {SUBTLE BODY} ಹುದುಗಿರುವ ದೋಷಕಾರಕಗಳನ್ನು ತಾಳೆ ಹಾಕಿ ನೋಡಿದಾಗ ಕಂಡುಬಂದ ವಿಷಯಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆನು. ಓದಿ, ಅರ್ಥೈಸಿ, ಬರೆಯಿರಿ.

ವೃತ್ತಿ ಧರ್ಮದಂತೆ ಇಲ್ಲಿ ವಿವರಿಸಿರುವ ರೋಗಿಗಳ ಪರಿಚಯವನ್ನು ಕೊಡಲಾಗುವುದಿಲ್ಲ.

ರೋಗಿ :
ಹದಿನೈದು ವರ್ಷ ವಯೋಮಾನದ ವಿದ್ಯಾರ್ಥಿ.

ಬಾಹ್ಯ ಲಕ್ಷಣಗಳು :
ಅಜೀರ್ಣ, ತಲೆ ನೋವು, ನಡೆಯಲು ಸಾಧ್ಯವಾಗದಷ್ಟು ತೀವ್ರತೆಯಿಂದ ಕೂಡಿದ ಆಬವಾತ {ARTHARITIS}.

ರೋಗ ನಿದಾನ ಮೆಡಿಕಲ್ ಡೌಸಿಂಗ್‍ನಿಂದ ಹೊರಬಂದ ಅಂಶಗಳು :
1. ರೋಗದ ಮೂಲಸ್ಥಾನವು ಗಂಟಲು {THROAT} ಮತ್ತು ಮನಸ್ಸಾಗಿದೆ {MIND}.
2. ಪಂಚತತ್ವಗಳಲ್ಲಿ ಜಲ ಮತ್ತು ವಾಯು, ಸಪ್ತಧಾತುಗಳಲ್ಲಿ ರಕ್ತ ಮತ್ತು ಮೇದಗಳಲ್ಲಿ ವಿಷಮತೆ. ತನ್ಮಾತ್ರೆಗಳಲ್ಲಿ ರಸವು ದೂಷಿತಗೊಂಡಿದೆ, ತ್ರಿದೋಷಗಳಲ್ಲಿ ವಾತ-ಪಿತ್ತಗಳು ದೂಷಿತಗೊಂಡಿವೆ. ಅಂತೆಯೇ, ತ್ರಿಗುಣಗಳಲ್ಲಿ ಸತ್ವ ಮತ್ತು ರಜೋ ಗುಣಗಳಿಂದ ಕೂಡಿರುತ್ತಾನೆ.
3. ರೋಗವು ಮಾನಸಿಕ {MENTAL} ಮತ್ತು ಭಾವನಾತ್ಮಕ {EMOTIONAL/ASTRAL} ಸ್ತರದಲ್ಲಿರುತ್ತದೆ.
4. ಸೂಕ್ಷ್ಮ ಶರೀರದ ವಿಶೇಷ ಗುಣಗಳಲ್ಲಿ {SUBTLE CHARACTERISTICS} ಮಾನಸಿಕ {MENTAL} ಙ್ಞಾನವಾಹಿನಿಯಲ್ಲಿ {SENSORIUM} ನ್ಯೂನತೆ.
5. ಅಂತೆಯೇ, ಸ್ಥೂಲ ಶರೀರದ ವಿಶೇಷ ಗುಣಗಳಲ್ಲಿ ನಮ್ಮಲ್ಲಿರುವ 72,000 ನರಮಂಡಲಗಳಲ್ಲಿ ನ್ಯೂನತೆ.
6. ಮಾನಸಿಕ ನ್ಯೂನತೆಯಲ್ಲಿ {PSYCHOLOGICAL FACTOR} ಆತಂಕ {ANXIETY}, ಆಸೆಗಳು {DESIRE} ಪ್ರಧಾನವಾಗಿದ್ದು ಇವೆರಡು ತನ್ನ ಆರೋಗ್ಯ ಮತ್ತು ವಿದ್ಯಾಭ್ಯಾಸದ ವಿಷಯದಲ್ಲಿ ಗೊಂದಲಗೊಂಡಿವೆ.
7. ಕುಂಡಲಿನಿ ಯೋಗ ಚಕ್ರಗಳಾದ ಸಹಸ್ರಾರ, ಆಙ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾದಿಸ್ತಾನ ಮತ್ತು ಮೂಲಾಧಾರಗಳಲ್ಲಿ ಮೊದಲಿನ ಮೂರು ಅಂದರೆ ಸಹಸ್ರಾರ, ಆಙ್ಞ, ವಿಶುದ್ಧಗಳು ತಮಗೆ ನಿಗದಿತವಾದುದಕ್ಕಿಂತಲೂ ಹೆಚ್ಚು ಕೆಲಸ ಮಾಡುತ್ತಿವೆ {OVER ACTIVE}. ವಿಶೇಷವೇನೆಂದರೆ ಉಳಿದ ಎಲ್ಲ ಚಕ್ರಗಳು ಸಮಸ್ಥಿತಿಯಲ್ಲಿರುತ್ತವೆ. ಇವುಗಳೊಂದಿಗೆ ಅನುಬಂಧ ಹೊಂದಿರುವ ಕಿರಣಗಳಲ್ಲಿ {RAYS} ಆಙ್ಞಾ ಚಕ್ರ ಮತ್ತು ಇದರೊಂದಿಗೆ ಅನುಬಂಧ ಹೊಂದಿರುವ ಕಿರಣವೊಂದನ್ನು ಬಿಟ್ಟು ಉಳಿದೆಲ್ಲವೂ ಸುಸ್ಥಿತಿಯಲ್ಲಿದ್ದು ತಮ್ಮ ತಮ್ಮ ಕಾರ್ಯಗಳನ್ನು ಸೂಕ್ತವಾಗಿ ನಿರ್ವಹಿಸುತ್ತಿವೆ. ಈಗಾಗಲೇ ಹೇಳಿರುವಂತೆ ಸಹಸ್ರಾರ, ಆಙ್ಞಾ, ವಿಶುದ್ಧ ಚಕ್ರಗಳಲ್ಲಿ ದೋಷವಿದ್ದರೂ ಸಹಸ್ರಾರ ಮತ್ತು ವಿಶುದ್ಧ ಚಕ್ರಗಳೊಂದಿಗೆ ಅನುಬಂಧ ಹೊಂದಿರುವ ಕಿರಣಗಳು ಸುಸ್ಥಿತಿಯಲ್ಲಿದ್ದು ತಮ್ಮ ಕೆಲಸವನ್ನು ಮಾಡುತ್ತಿದೆ ಆದರೆ, ಆಙ್ಞಾ ಚಕ್ರದೊಂದಿಗೆ ಅನುಬಂಧ ಹೊಂದಿರುವ ಮೂರನೆಯ ಕಿರಣವು ದುಷ್ಟತೆಯ ಕಡೆಗೆ ಸಾಗುತ್ತಿದೆ.

ವಿಶ್ಲೇಷಣೆ :
1. ರೋಗವು ಮಾನಸಿಕ {MENTAL} ಮತ್ತು ಭಾವನಾತ್ಮಕ {EMOTIONAL/ASTRAL} ಸ್ತರದಲ್ಲಿರುವುದನ್ನು ಗಮನಿಸಿದಾಗ ಈತನು ಸೂಕ್ಷ್ಮಗ್ರಾಹಿಯಾಗಿರುತ್ತಾನೆ. ಮನಸ್ಸು ಸಣ್ಣ-ಪುಟ್ಟ ವಿಷಯಗಳಿಗೂ ಗಲಿಬಿಲಿಗೊಂಡು ಈತನ ಭಾವನೆಗಳಲ್ಲಿ ದುಷ್ಪರಿಣಾಮ ಉಂಟು ಮಾಡುತ್ತಿದೆ.
2. ರೋಗದ ಮೂಲಸ್ಥಾನವು ಗಂಟಲು {THROAT} ಮತ್ತು ಮನಸ್ಸಾಗಿರುವುದನ್ನು {MIND} ಗಮನಿಸಿದಾಗ ಗಂಟಲು ವಿಶುದ್ಧ ಚಕ್ರದ ಸ್ಥಾನವಾಗಿದ್ದು ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸುತ್ತದೆ. ಇದು ದುಷ್ಟಗೊಂಡಿರುವುದನ್ನು ಗಮನಿಸಿದಾಗ ಊರ್ಧ್ವ ಅರಿವಿನ ಕೇಂದ್ರವಾದ {HIGHER CREATIVE} ಇದು ಸಕ್ರಮವಾಗಿ ಕಾರ್ಯ ನಿರ್ವಹಿಸದೆ ನಾನಾ ಶಾರೀರಿಕ ಸಮಸ್ಯೆಗಳಾದ ಅಜೀರ್ಣ, ತಲೆ ನೋವು, ಮುಂತಾದುವುಗಳಲ್ಲದೇ ಅಪಸ್ಮಾರ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.
3. ಇನ್ನು ಈತನು ಮಾನಸಿಕ {MENTAL} ಮತ್ತು ಭಾವನಾತ್ಮಕ {EMOTIONAL/ASTRAL} ಸ್ತರದಲ್ಲಿರುವುದನ್ನು ಗಮನಿಸಿದಾಗ ಸೂಕ್ಷ್ಮಗ್ರಾಹಿಯಾಗಿ ತನ್ನ ಜೀವನದಲ್ಲಿ ನಡೆದ ಸಣ್ಣ-ಪುಟ್ಟ ಘಟನೆಗಳನ್ನು ಅಗಾಧವಾಗಿ ತೆಗೆದುಕೊಂಡು ಭ್ರಮಿತನಾಗಿ ವಿರುದ್ಧ ಗತಿಯಲ್ಲಿ {NEGATIVE THOUGHTS} ಚಿಂತಿಸುತ್ತ ಙ್ಞಾನವಾಹಿನಿಗಳು {SENSORIUM} ಸಕ್ರಮವಾಗಿ ಕೆಲಸ ಮಾಡದಂತೆ ಮಾಡಿಕೊಳ್ಳುತ್ತಿದ್ದಾನೆ.
4. ಶ್ರೀ ಪತಂಜಲೀ ಮಹರ್ಷಿಗಳು ಮನುಕುಲಕ್ಕೆ ಕೊಡುಗೆಯಾಗಿ ಕೊಟ್ಟಿರುವ ಕುಂಡಲಿನಿ ಯೋಗಚಕ್ರಗಳಲ್ಲಿ ಸಹಸ್ರಾರ, ಆಙ್ಞ, ವಿಶುದ್ಧಗಳು ದುಷ್ಟಗೊಂಡಿದ್ದು ತಮಗೆ ನಿಗದಿತವಾದ ಕಾರ್ಯಕ್ಕಿಂತಲೂ ಅಧಿಕವಾಗಿ ಕೆಲಸ {OVER ACTIVE} ಮಾಡುತ್ತ ನಾನಾ ಸಮಸ್ಯೆಗಳಿಗೆ ಕಾರಣೀಭೂತವಾಗಿವೆ. ಉಳಿದ ಅನಾಹತ, ಮಣಿಪುರ, ಸ್ವಾದಿಸ್ತಾನ ಮತ್ತು ಮೂಲಾಧಾರಗಳು ಇವುಗಳೊಂದಿಗೆ ಅನುಬಂಧ ಹೊಂದಿರುವ ಕಿರಣಗಳು {RAYS} ಸುಸ್ಥಿತಿಯಲ್ಲಿರುವುದು ಸಮಾಧಾನಕರ ಸಂಗತಿಯಾಗಿದೆ.
5. ಅಂತೆಯೇ, ಈತನ ಸಮಸ್ಯೆಯು ಮಾನಸಿಕ {MENTAL} ಮತ್ತು ಭಾವನಾತ್ಮಕ {EMOTIONAL/ASTRAL} ಸ್ತರದಲ್ಲಿದ್ದರೂ ಇವುಗಳಲ್ಲಿ ಹೊಂದಾಣಿಕೆ ಇಲ್ಲದ {LACK OF CO-ORDINATION} ಕಾರಣ ಇವುಗಳು ಒಂದಕ್ಕೆ ಒಂದು ಪೂರಕವಾಗುವ ಬದಲು ವಿರುದ್ಧ ರೀತಿಯಲ್ಲಿ ಕೆಲಸ ಮಾಡುತ್ತಿರುವ ಕಾರಣ ಸಮಸ್ಯೆಗಳ ಗೂಡಾಗಿರುತ್ತಾನೆ.

ಚಿಕಿತ್ಸೆ ಮತ್ತು ಪರಿಣಾಮ :
ಈ ಮೇಲ್ಕಂಡ ಅಂಶಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಪರಿಪೂರ್ಣ {HOLISTIC} ಚಿಕಿತ್ಸೆಯನ್ನು ನವರತ್ನೌಷಧ ಮತ್ತು ಸೂಕ್ತ ಆಯುರ್ವೇದ ಔಷಧಗಳಿಂದ ಸಂಯೋಜಿಸಿ ರೋಗಿಯ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ಸೂಚಿಸಿ ಮಾತಾ-ಪಿತರಿಗೆ ಸೂಕ್ತ ಸಲಹೆಗಳನ್ನು ಕೊಟ್ಟು ಚಿಕಿತ್ಸೆ ನಡೆಸಲಾಗುತ್ತಿದೆ. ಈಗ ಅಪಸ್ಮಾರವು ಮರುಕಳಿಸಿಲ್ಲ. ಚಿಕಿತ್ಸೆಯು ಮುಂದುವರೆಯುತ್ತಿದೆ.

IMAGES OF AURA BY KIRLIAN CAMERA
2016-12-14-20_35-athish-energy-field
IMAGES OF CHAKRAS BY KIRLIAN CAMERA

2016-12-14-20_35-athish-chakras