ಇಪ್ಪತ್ತೊಂದನೆಯ ಸಂಚಿಕೆ

ನನ್ನ ಮಾತು :
ಈ ಸಂಚಿಕೆಯಲ್ಲಿ ಒಬ್ಬ ಅವಿವಾಹಿತ ವಿದ್ಯಾರ್ಥಿನಿಯ ಬಗ್ಗೆ ಬರೆಯುತ್ತಿದ್ದೇನೆ. ವೈಷಿಷ್ಠ್ಯವೇನೆಂದರೆ ಈಕೆಯ ರೋಗನಿದಾನವನ್ನು ಮಾಡಲು ಮೆಡಿಕಲ್ ಡೌಸಿಂಗ್ ತಂತ್ರದಿಂದ ಮಾಡಿ ಕಿರ್ಲಿಯನ್ ಕ್ಯಾಮರಾದಿಂದ ಸೂಕ್ಷ್ಮ ಶರೀರದಲ್ಲಿ {SUBTLE BODY} ಅಡಗಿರುವ ಸಮಸ್ಯೆಗಳನ್ನು ಸ್ಪಷ್ಟವಾಗಿ ಚಿತ್ರೀಕರಿಸಲಾಯಿತು. ಡೌಸಿಂಗ್ ತಂತ್ರದಲ್ಲಿ ಕಂಡುಬಂದ ಸೂಕ್ಷ್ಮ ಶರೀರದ ನ್ಯೂನತೆಗಳೊಂದಿಗೆ ಕಿರ್ಲಿಯನ್ ಕ್ಯಾಮರಾದಿಂದ ತೆಗೆದ ಚಿತ್ರಗಳನ್ನು ತಾಳೆ ಹಾಕಿ ನೋಡಿದಾಗ ಕಂಡು ಬಂದ ಅಂಶಗಳು ನಿಚ್ಚಳವಾಗಿ ಸಮಸ್ಯೆಗಳು ಒಂದೇ ಆಗಿರುವುದು ಖಚಿತವಾಯಿತು. ಈ ಎಲ್ಲ ಅಂಶಗಳನ್ನು ಇಲ್ಲಿ ಪ್ರಕಟಿಸಿರುವ ಚಿತ್ರಗಳನ್ನು ಅವಲೋಕಿಸಿ ತಿಳಿದುಕೊಳ್ಳಬಹುದು. ಇದನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಓದಿ, ಅರ್ಥೈಸಿ, ಬರೆಯಿರಿ.

ವೃತ್ತಿ ಧರ್ಮದಂತೆ ಇಲ್ಲಿ ವಿವರಿಸಿರುವ ರೋಗಿಗಳ ಪರಿಚಯವನ್ನು ಕೊಡಲಾಗುವುದಿಲ್ಲ.

ರೋಗಿ :
ಹದಿನೊಂಟು ವರ್ಷ ವಯೋಮಾನದ ಅವಿವಾಹಿತ ವಿದ್ಯಾರ್ಥಿನಿ.

ಬಾಹ್ಯ ಲಕ್ಷಣಗಳು :
ಪದೇ ಪದೇ ಬವಳಿ {FAILT} ಬರುವುದು, ಜೀವನದಲ್ಲಿ ನಿರಾಸಕ್ತಿ, ಅಜೀರ್ಣ ಸಮಸ್ಯೆಗಳು, ವಿದ್ಯೆಯಲ್ಲಿ ಏಕಾಗ್ರತೆ ಇಲ್ಲದಿರುವುದು, ನಿದ್ರಾನಾಶ, ತಲೆನೋವು, ಶರೀರದಾದ್ಯಂತ ನವೆ {ITCHING}, ಉಸಿರಾಟದಲ್ಲಿ ತೊಂದರೆ, ಇತ್ಯಾದಿ.

ರೋಗ ನಿದಾನ ಮೆಡಿಕಲ್ ಡೌಸಿಂಗ್‍ನಿಂದ ಹೊರಬಂದ ಅಂಶಗಳು :
1. ರೋಗದ ಮೂಲಸ್ಥಾನವು ಗಂಟಲು {THROAT} ಮತ್ತು ಮನಸ್ಸಾಗಿದೆ {MIND}.
2. ರೋಗವು ಮಾನಸಿಕ {MENTAL} ಮತ್ತು ಭೌಧ್ಯಾತ್ಮಕ {INTUTIONAL} ಸ್ತರದಲ್ಲಿದೆ.
3. ಪಂಚತತ್ವಗಳಲ್ಲಿ ಜಲ ಮತ್ತು ಪೃಥ್ವಿಗಳು, ಸಪ್ತ ಧಾತುಗಳಲ್ಲಿ ರಕ್ತ ಮತ್ತು ಮಾಂಸಗಳು, ತನ್ಮಾತ್ರೆಗಳಲ್ಲಿ ರಸ ಮತ್ತು ಗಂಧಗಳು ದುಷ್ಟಗೊಂಡಿದ್ದು ತ್ರಿಗುಣಗಳಲ್ಲಿ ಸತ್ವ ಮತ್ತು ರಜೋ ಗುಣಗಳಿಂದ ಕೂಡಿದವಳಾಗಿರುತ್ತಾಳೆ.
4. ಸೂಕ್ಷ್ಮ ಶರೀರದ ವಿಶೇಷ ಗುಣಗಳಲ್ಲಿ {SUBTLE CHARACTERISTICS} ಮಾನಸಿಕ {MIND} ಮತ್ತು ಙ್ಞಾನವಾಹಕ ನರಗಳ {SENSORY NERVES} ಕಾರ್ಯವೈಖರಿಯಲ್ಲಿ ನ್ಯೂನತೆ ಅಂತೆಯೇ ಸ್ಥೂಲ ಶರೀರದಲ್ಲಿರುವ ಎಲ್ಲ 72,000 ನರಮಂಡಲದಲ್ಲೂ ನ್ಯೂನತೆಯಿದೆ {ಇದನ್ನು ಆಧುನಿಕ ವೈದ್ಯರು ಹೇಳುವಂತೆ ಕೇಂದ್ರ ನರಮಂಡಲ ಮತ್ತು ಪ್ಯಾರಾ ಸಿಂಪಥೆಟಿಕ್ ನರಮಂಡಲದಲ್ಲಿ ನ್ಯೂನತೆಯಿದೆ}
5. ಮಾನಸಿಕ ಚಿಂತನೆಗೆ {PSYCHOLOGICAL FACTORS} ಗಮನ ಹರಿಸಿದಾಗ ತನ್ನ ಆರೋಗ್ಯ ಮತ್ತು ವಿದ್ಯಾಭ್ಯಾಸದ ಕಡೆಗೆ ಒತ್ತು ಕೊಡುತ್ತಿದೆ.
6. ಈಕೆಯ ಬುದ್ಧಿಮತ್ತೆಯನ್ನು {BIO-METRIC} ಗಮನಿಸಿದಾಗ ಅದು 300 ಅಂಶಗಳಿಂದ ಕೂಡಿದ್ದು ಬುದ್ಧಿವಂತಳೆಂಬುದನ್ನು ಸಾರಿ ಹೇಳುತ್ತಿದೆ ಆದರೆ ಅದರ ಉಪಯೋಗ ಕೇವಲ ಶೇಕಡ 10 ರಷ್ಟು ಮಾತ್ರ ಇದೆ.
7. ಇನ್ನು ಶ್ರೀ ಪತಂಜಲೀ ಮಹರ್ಷಿಗಳಿಂದ ಪ್ರಣಿತವಾದ ಕುಂಡಲಿನಿ ಯೋಗಚಕ್ರಗಳನ್ನು ಗಮನಿಸಿದಾಗ ಸಪ್ತ ಚಕ್ರಗಳಲ್ಲಿ ಸಹಸ್ರಾರ, ಅನಾಹತ ಮತ್ತು ಸ್ವಾದಿಸ್ತಾನಗಳು ಆರೋಗ್ಯವಾಗಿವೆ. ಉಳಿದ ಆಙ್ಞ, ವಿಶುದ್ಧ, ಮಣಿಪುರ, ಮೂಲಾಧಾರ ಚಕ್ರಗಳು ತಮಗೆ ನಿಗದಿತವಾದುದಕ್ಕಿಂತಲೂ ಅಧಿಕ ಕೆಲಸ ಮಾಡುತ್ತ ದುಷ್ಟವಾಗಿ ವರ್ತಿಸುತ್ತಿವೆ. ಅಂತೆಯೇ ಇವುಗಳೊಂದಿಗೆ ಅನುಬಂಧ ಹೊಂದಿರುವ ಕಿರಣಗಳು {RAYS} ಸುಸ್ಥಿತಿಯಲ್ಲಿರುವುದು ಸಮಾಧಾನಕರವಾಗಿದೆ. ಆದರೆ ಮಾನಸಿಕ ಶರೀರ ಮತ್ತು ಭೌತಿಕ ಶರೀರದಲ್ಲಿ {MENTAL AND PHYSICAL BODY} ಹೊಂದಾಣಿಕೆ ಇಲ್ಲದಂತಾಗಿದೆ.

ವಿಶ್ಲೇಷಣೆ :
1. ರೋಗದ ಮೂಲಸ್ಥಾನವು ಮನಸ್ಸು {MIND} ಮತ್ತು ಗಂಟಲಾಗಿರುವುದನ್ನು {THROAT} ಗಮನಿಸಿದಾಗ ಗಂಟಲಿನಲ್ಲಿರುವ ಅಂಗಾಂಗಗಳು ದುಷ್ಟಗೊಂಡಿದ್ದು ಥೈರಾಯ್ಡ್ ಗ್ರಂಥಿಯಲ್ಲಿ ಕಾರ್ಯಕ್ಷಮತೆ ಇಲ್ಲದಿರುವುದು ಸ್ಪಶ್ಟವಾಗಿದೆ. ಇದಕ್ಕೆ ರೋಗಗ್ರಸ್ಥ ಮನಸ್ಸು ಇಂಬು ಕೊಡುತ್ತಿದೆ.
2. ರೋಗವು ಮಾನಸಿಕ {MENTAL} ಮತ್ತು ಭೌಧ್ಯಾತ್ಮಕ {INTUTIONAL} ಸ್ತರದಲ್ಲಿರುವುದು ಮತ್ತು ಈಕೆಯ ಬುದ್ಧಿಮತ್ತೆಯು {BIO-METRIC} 300 ಅಂಕಗಳಿಂದ ಕೂಡಿದ್ದರೂ ಅದರ ಉಪಯೋಗ ಕೇವಲ ಶೇಕಡ 10 ರಷ್ಟು ಇರುವುದನ್ನು ಗಮನಿಸಿದಾಗ ಇವುಗಳ ಮಧ್ಯೆ ಇರುವ ತಾಕಲಾಟದಿಂದಾಗಿ ಮತ್ತು ಊರ್ಧ್ಯ ಅರಿವಿನ ಕೇಂದ್ರವಾದ {HIGHER CREATIVE} ವಿಶುದ್ಧ ಚಕ್ರದಲ್ಲಿ ಮಾತ್ರ ಸಮಸ್ಯೆಯು ಸೀಮಿತವಾಗಿದ್ದು ಇದರ ಸಂಬಂಧಿಯಾದ ಅಧೋ ಅರಿವಿನ ಕೇಂದ್ರವಾದ {LOWER CREATIVE} ಸ್ವಾದಿಸ್ತಾನ ಚಕ್ರವು ಸುಸ್ಥಿತಿಯಲ್ಲಿರುವುದನ್ನು ಗಮನಿಸುವುದು ಅತ್ಯಾವಶ್ಯಕ. ಈಕೆಗೆ ಪಂಚತತ್ವಗಳಲ್ಲಿ ಜಲ ಮತ್ತು ಇದಕ್ಕೆ ಸಂಬಂಧಿತವಾದ ರಸತನ್ಮಾತ್ರೆಯಲ್ಲಿ ನ್ಯೂನತೆಯಿದ್ದರೂ ಋತುಕ್ರಿಯೆಯಲ್ಲಿ ಸಮಸ್ಯೆ ಇಲ್ಲದಿರುವುದು ಸಮಾಧಾನಕರವಾದ ಅಂಶವಾಗಿರುತ್ತದೆ.
3. ಪಂಚತತ್ವಗಳಲ್ಲಿ ಜಲ ಮತ್ತು ಪೃಥ್ವಿಗಳು, ಸಪ್ತ ಧಾತುಗಳಲ್ಲಿ ರಕ್ತ ಮತ್ತು ಮಾಂಸಗಳು, ತನ್ಮಾತ್ರೆಗಳಲ್ಲಿ ರಸ ಮತ್ತು ಗಂಧಗಳಲ್ಲಿರುವ ಸಮಸ್ಯೆಗಳು ನಿರ್ದಿಷ್ಟವಾಗಿರದೆ ಅನಿರ್ಧಿಷ್ಟವಾಗಿ ನಾನಾ ರೂಪದಲ್ಲಿ ಕಾಡುತ್ತಿವೆ. ತ್ರಿಗುಣಗಳಲ್ಲಿ ಸತ್ವ ಮತ್ತು ರಜೋ ಗುಣಗಳಿರುವುದರಿಂದ ಇವುಗಳು ಸಮಸ್ಯೆಗಳನ್ನು ಅತಿ ಕ್ಲಿಷ್ಟಕರವಾಗದಂತೆ ನೋಡಿಕೊಳ್ಳುತ್ತಿದೆ.
4. ಸೂಕ್ಷ್ಮ ಶರೀರದ ಕಾರ್ಯವೈಖರಿಯನ್ನು ಗಮನಿಸಿದಾಗ ನಮ್ಮಲ್ಲಿರುವ 72,000 ನರಮಂಡಲದಲ್ಲೂ ಕಾರ್ಯಕ್ಷಮತೆ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
5. ಮಾನಸಿಕ ಚಿಂತನೆಯನ್ನು {PSYCHOLOGICAL FACTORS} ಗಮನಿಸಿದಾಗ ತಾನು ಬುದ್ದಿವಂತಳಾದರೂ ಓದಿನಲ್ಲಿ ಗುರಿ ಮುಟ್ಟುತ್ತಿಲ್ಲ, ನನ್ನ ಶಾರೀರಿಕ ಆರೋಗ್ಯವು ಸರಿಯಾಗಿಲ್ಲ ಇದರಿಂದ ತನಗೆ ಮುಕ್ತಿ ಇಲ್ಲವೇ ಇಲ್ಲ ಎಂಬ ವಿರುದ್ಧ ಯೋಚನೆಯಲ್ಲಿ {NEGATIVE THINKING} ಸಾಗುತ್ತಿರುವುದರಿಂದ ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸುತ್ತಿವೆ.
6. ಇನ್ನು ಸಪ್ತ ಚಕ್ರಗಳ ಬಗ್ಗೆ ಗಮನಿಸಿದಾಗ ಸಹಸ್ರಾರ, ಅನಾಹತ ಮತ್ತು ಸ್ವಾದಿಸ್ತಾನಗಳು ಸುಸ್ಥಿತಿಯಲ್ಲಿರುವುದು ಸಮಾಧಾನಕರವಾಗಿದ್ದು ಉಳಿದ ಆಙ್ಞ, ವಿಶುದ್ಧ, ಮಣಿಪುರ, ಮೂಲಾಧಾರಗಳು ಅತಿ ಹೆಚ್ಚಿನ ಕೆಲಸ {OVER ACTIVE} ಮಾಡುತ್ತ ತಮಗೆ ಮನಬಂದಂತೆ ಕಾರ್ಯನಿರ್ವಹಿಸುತ್ತಿವೆಯಾದ ಕಾರಣ ಚಕ್ರಗಳಲ್ಲಿ ನಿಗದಿತವಾಗಿ ಹರಿಯಬೇಕಾದ ಶಕ್ತಿಯ {FLOW OF COSMIC ENERGY} ಹರಿವಿಲ್ಲದ ಕಾರಣ ಶರೀರ ಮತ್ತು ಮನಸಿನ ಮೇಲೆ ದುಷ್ಟ ಪರಿಣಾಮ ಬೀರುತ್ತ ನಾನಾ ಸಮಸ್ಯೆಗಳನ್ನು ಉಂಟು ಮಾಡುತ್ತಿವೆ. ಇದರಿಂದಾಗಿಯೇ ಶರೀರ ಮತ್ತು ಮನಸ್ಸಿನ ಮಧ್ಯೆ ಇರಬೇಕಾದ ಅನ್ಯೋನ್ಯತೆ ಇಲ್ಲದಂತಾಗಿದೆ.
7. ಸಲಹಾ ಸಮಯದಲ್ಲಿ {CONSULTATION} ಹೊರಬಂದ ಅಂಶ : ಸುಮಾರು ಹನ್ನೆರಡು ವರ್ಷಗಳ ಹಿಂದೆ 5-6 ವರ್ಷಗಳ ಪುಟ್ಟ ಬಾಲೆಯನ್ನು ಈಕೆಯ ಮಾತಾ-ಪಿತರು ನನ್ನ ಬಳಿಗೆ ಚಿಕಿತ್ಸೆಗಾಗಿ ಕರೆತಂದಿದ್ದರು. ಆಗ ನಾನು ಸೂಕ್ಷ್ಮಾತಿಸೂಕ್ಷ್ಮವಾಗಿ ಗಮನಿಸಿ ಕೊಟ್ಟ ಸಲಹೆಯನ್ನು ಅವರುಗಳು ಅವರದೇ ಆದ ಕಾರಣಗಳಿಂದಾಗಿ ಚಿಕಿತ್ಸೆಯನ್ನು ಬೇರೆ ವೈದ್ಯರುಗಳಿಂದ ನಡೆಸಿ ಚಿಕಿತ್ಸೆಯು ಫಲಕೊಡಲಾಗದ ಕಾರಣ ನನ್ನ ಬಳಿಗೇ ಬಂದಿರುವುದಾಗಿ ತಿಳಿಸಿದರು. ಇಷ್ಟು ದೀರ್ಘಕಾಲ ಚಿಕಿತ್ಸೆಯ ಹೆಸರಿನಲ್ಲಿ ಆಕೆಯಲ್ಲಿ ಶೇಖರಗೊಂಡಿದ್ದ ವಿಷಕಾರಕಗಳನ್ನು ಹೊರಹಾಕಬೇಕಾದುದು ಅತ್ಯಾವಶ್ಯಕ.

ಚಿಕಿತ್ಸೆ ಮತ್ತು ಪರಿಣಾಮ :
ಈ ಮೇಲ್ಕಂಡ ಎಲ್ಲ ಅಂಶಗಳನ್ನು ಕೂಲಂಕಶವಾಗಿ ಪರಿಗಣಿಸಿದಾಗ ಆಕೆಯಲ್ಲಿ ತೋರುತ್ತಿದ್ದುದು ಬಾಹ್ಯ ಲಕ್ಷಣವೇ ಹೊರತು ನಿಜವಾದ ಸಮಸ್ಯೆಗಳಲ್ಲ. ಆದ ಕಾರಣ ಮೆಡಿಕಲ್ ಡೌಸಿಂಗ್ ನಿಂದ ಕಂಡು ಬಂದ ಅಂಶಗಳಿಗೆ ಪೂರಕವಾಗಿ ಕಿರ್ಲಿಯನ್ ಕ್ಯಾಮರಾದಿಂದ ಮೂಡಿಬಂದಿರುವ ಸೂಕ್ಷ್ಮ ಶರೀರದ ಚಿತ್ರಗಳು ಮೂಲ ಸಮಸ್ಯೆಗಳನ್ನು ಯಥಾವತ್ತಾಗಿ ನಿಖರವಾಗಿ ತೋರಿಸಿವೆ. ಇವುಗಳನ್ನು ಪ್ರಮುಖವಾಗಿ ಅರ್ಥೈಸಿ ಅಮೂಲ್ಯವಾದ ರತ್ನೌಷಧಗಳಿಂದ ಮಾಡಿದ ದಿವ್ಯ ಔಷಧಗಳೊಂದಿಗೆ ಸೂಕ್ತವಾದ ಆಯುರ್ವೇದ ಔಷಧಗಳನ್ನು ಸಂಯೋಜಿಸಿ ಕೊಟ್ಟು ಈಕೆಯ ದಿನಚರಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಸೂಚಿಸಿ ಪರಿಪೂರ್ಣವಾದ ರಿತಿಯಲ್ಲಿ ಚಿಕಿತ್ಸೆಯನ್ನು ನಡೆಸಲಾಗುತ್ತಿದೆ. ಕೇಲವ 2 ತಿಂಗಳ ಅವಧಿಯಲ್ಲೇ ನಿರೀಕ್ಷೆಗೂ ಮೀರಿದ ಉತ್ತಮ ಫಲಿತಾಂಶಗಳು ಕಂಡುಬಂದು ರೋಗಮುಕ್ತಳಾಗುವ ಕಡೆಗೆ ದಾಪುಗಾಲು ಹಾಕಿ ಸಾಗುತ್ತಿದ್ದಾಳೆ. ಚಿಕಿತ್ಸೆಯು ಮುಂದುವರೆದಿದೆ.

IMAGES OF AURA BY KIRLIAN CAMERA

2016-08-13-11_26-k-n-anusha-energy-field
IMAGES OF CHAKRAS BY KIRLIAN CAMERA

2016-08-13-11_26-k-n-anusha-chakras