ಹತ್ತೊಂಭತ್ತನೆಯ ಸಂಚಿಕೆ

ನನ್ನ ಮಾತು :
2015 ಏಪ್ರಿಲ್ ಮಾಸದಲ್ಲಿ 36 ವರ್ಷ ವಯಸ್ಸಿನ ಅವಿವಾಹಿತ ಪುರುಷರನ್ನು “ಮೆಡಿಕಲ್ ಡೌಸಿಂಗ್” ವಿಙ್ಞಾನದ ಮೂಲಕ ಪರೀಕ್ಷಿಸಿದಾಗ ಆತನ ಸೂಕ್ಷ್ಮ ಶರೀರ, ಮಾನಸಿಕ ಸ್ತರಗಳಲ್ಲಿ ಅಡಲಾಗಿದ್ದ ದೋಷಗಳಿಂದ ಆಗುತ್ತಿದ್ದ ಸಮಸ್ಯೆಗಳು ಮತ್ತು ಬಾಹ್ಯದಲ್ಲಿ ಕಾಣುತ್ತಿದ್ದ ರೋಗಲಕ್ಷಣಗಳನ್ನು ಇಂದಿನ ಆತನ ಸ್ಥಿತಿಯನ್ನು ಮತ್ತು ಈ ಮಧ್ಯದಲ್ಲಿ ಆತನ ಜೀವನದಲ್ಲಿ ನಡೆದ ಘಟನೆಗಳನ್ನು ತಮ್ಮ ಮುಂದಿಡುತ್ತಿದ್ದೇನೆ. ಮುಂದಿನ ಸಂಚಿಕೆಯಲ್ಲಿ ಇಂತಹದೇ ಒಬ್ಬ ಹೆಣ್ಣು ಮಗಳ ನೋವು ಮತ್ತು ಸಾಧನೆಗಳ ಬಗ್ಗೆ ಬರೆಯುತ್ತೇನೆ. ಓದಿ, ಅರ್ಥೈಸಿ, ಬರೆಯಿರಿ.
ವೃತ್ತಿ ಧರ್ಮದಂತೆ ಇಲ್ಲಿ ವಿವರಿಸಿರುವ ರೋಗಿಗಳ ಪರಿಚಯವನ್ನು ಕೊಡಲಾಗುವುದಿಲ್ಲ.

ರೋಗಿ :
ಮೂವತ್ತಾರು ವರ್ಷ ವಯೋಮಾನದ ಅವಿವಾಹಿತ ಪುರುಷರು.

ಬಾಹ್ಯ ಲಕ್ಷಣಗಳು :
ಅಜೀರ್ಣ, ನಿದ್ರಾನಾಶ, ಜೀವನದಲ್ಲಿ ನಿರಾಸಕ್ತಿ, ಓದಿದುದನ್ನು ನೆನೆಸಿಕೊಳ್ಳಲಾರ ಅದನ್ನು ಸರಿಯಾಗಿ ಅರ್ಥೈಸಲಾರ, ಹೊಸದನ್ನು ಕಲಿಯಲಾರ ಇದರಿಂದಾಗಿ ಆತನ ಉದ್ಯೋಗಸ್ಥರು ಇವನೊಬ್ಬ ಅಪ್ರಯೋಜಕ ಎಂಬ ತೀರ್ಮಾನಕ್ಕೆ ಬಂದು ಯಾವುದೇ ಮಹತ್ವವನ್ನು ಕೊಡುತ್ತಿಲ್ಲ, ಉದ್ಯೋಗದಲ್ಲಿ ಬಹಳ ಹಿಂದೆ ಬಿದ್ದಿರುತ್ತಾರೆ.

ರೋಗ ನಿದಾನ ಮೆಡಿಕಲ್ ಡೌಸಿಂಗ್‍ನಿಂದ ಹೊರಬಂದ ಅಂಶಗಳು :
1. ರೋಗದ ಮೂಲಸ್ಥಾನವು ಮನಸ್ಸು {MIND} ಮತ್ತು ಕೋಶ್ಠವಾಗಿರುತ್ತದೆ {ಹೊಟ್ಟೆ/ABDOMEN}.
2. ರೋಗವು ಮನಸ್ಸು ಮತ್ತು ಶಾರೀರಿಕ {MENTAL AND PHYSICAL} ಸ್ತರದಲ್ಲಿರುತ್ತದೆ.
3. ಪಂಚತತ್ವಗಳಲ್ಲಿ ಭೂಮಿ, ಜಲಾ, ಅಗ್ನಿತತ್ವಗಳು, ಸಪ್ತಧಾತುಗಳಲ್ಲಿ ರಕ್ತ, ಮಾಂಸ ಮತ್ತು ಮೇದಧಾತುಗಳು ದುಷ್ಟಗೊಂಡಿವೆ, ಇದಕ್ಕೆ ರಸ ಮತ್ತು ಗಂಧ ತನ್ಮಾತ್ರೆಗಳು ಇಂಬುಕೊಡುತ್ತಿವೆ.
4. ಸೂಕ್ಷ್ಮ ಶರೀರದ ವಿಶೇಷ ಗುಣಗಳನ್ನು {SUBTLE CHARACTERISTICS} ಗಮನಿಸಿದಾಗ ಮನಸ್ಸು ಮತ್ತು ಙ್ಞಾನವಾಹಿನಿಗಳ {MIND AND SENSORIUM} ಕಾರ್ಯಕ್ಷಮತೆ ಕುಗ್ಗಿದೆ. ಅಂತೆಯೇ, ಸ್ಥೂಲ ಶರೀರದ ವಿಶೇಷ ಗುಣಗಳನ್ನು {PHYSICAL CHARACTERISTICS} ಗಮನಿಸಿದಾಗ ಪ್ರಾಣವಾಹಕ ನರಮಂಡಲ {CNS}, ಙ್ಞಾನವಾಹಿನಿಗಳು {SENSORIUM} ಮತ್ತು ನಿರ್ನಾಳ ಗ್ರಂಥಿಗಳ {ENDOCRINE GLANDS} ಕಾರ್ಯಕ್ಷಮತೆಯು ಹಾಳಾಗಿದೆ.
5. ಕುಂಡಲಿನಿ ಯೋಗದ ಸಪ್ತಚಕ್ರಗಳಲ್ಲಿ ಅನಾಹತ ಚಕ್ರವನ್ನುಳಿದ ಇತರ ಆರೂ ಚಕ್ರಗಳು ಅಂದರೆ, ಸಹಸ್ರಾರ, ಆಙ್ಞ, ವಿಶುದ್ಧ, ಮಣಿಪುರ, ಸ್ವಾಧಿಸ್ತಾನ ಮತ್ತು ಮೂಲಾಧಾರಗಳು ಅತಿ ಹೆಚ್ಚು ಕೆಲಸ {OVER ACTIVE} ಮಾಡುವ ಮೂಲಕ ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಂಡಿವೆ, ಅಂತೆಯೇ ಇವುಗಳೊಂದಿಗೆ ಅನುಬಂಧ ಹೊಂದಿರುವ ಕಿರಣಗಳ {RAYS} ಕಾರ್ಯವೂ ಸಹ ಕ್ರಮಬದ್ಧವಾಗಿಲ್ಲ. ಇವುಗಳಿಂದಾಗಿ ಭಾವನಾತ್ಮಕ ಮತ್ತು ಸ್ಥೂಲ ಶರೀರಗಳಲ್ಲಿ, ಮಾನಸಿಕ ಮತ್ತು ಸ್ಥೂಲ ಶರೀರಗಳಲ್ಲಿ ಅನುಬಂಧವಿಲ್ಲದೆ ಅವುಗಳು ತಮಗಿಷ್ಟ ಬಂದಂತೆ ಕೆಲಸ ಮಾಡುತ್ತ ಸಮಸ್ಯೆಗಳನ್ನುಂಟು ಮಾಡುತ್ತಿವೆ.
6. ಈತನ ಅಂತಃಸತ್ವವು {BIO-METRIC} 240 ಅಂಶಗಳಿಂದ ಕೂಡಿದ್ದರೂ ಅದನ್ನು ಕ್ರಮಬದ್ಧವಾಗಿ ಉಪಯೋಗಿಸಲಾರದೆ ಕೇವಲ ಶೇಕಡ 10 ಅಂಶವನ್ನು ಮಾತ್ರ ಉಪಯೋಗಿಸುತ್ತಿದ್ದಾನೆ.

ವಿಶ್ಲೇಷಣೆ :
1. ರೋಗದ ಮೂಲಸ್ಥಾನವು ಮನಸ್ಸು {MIND} ಮತ್ತು ಕೋಶ್ಠವಾಗಿರುವುದನ್ನು {ಹೊಟ್ಟೆ/ABDOMEN} ಗಮನಿಸಿದಾಗ ಈತನು ತನ್ನ ಎಲ್ಲ ನೋವು-ನಲಿವನ್ನು ತನ್ನ ಆತ್ಮೀಯರೊಂದಿಗೂ ಹಂಚಿಕೊಳ್ಳದೆ ತನ್ನ ಹೊಟ್ಟೆಯನ್ನೇ ಉಗ್ರಾಣ {STORE HOUSE} ಮಾಡಿಕೊಂಡು ತನಗೆ ತಾನೇ ಅನುಭವಿಸುತ್ತಿದ್ದಾನೆ, ಇದರಿಂದಾಗಿ ಪಂಚತತ್ವಗಳಲ್ಲಿ ಅಗ್ನಿ ತತ್ವವು ದುಷ್ಟಗೊಂಡಿದೆಯಾದ ಕಾರಣ ಜಲಾ ಮತ್ತು ಭೂತತ್ವಗಳೂ ಸಹ ದುಷ್ಟಗೊಂಡಿವೆ.
2. ರೋಗವು ಮನಸ್ಸು ಮತ್ತು ಶಾರೀರಿಕ {MENTAL AND PHYSICAL} ಸ್ತರದಲ್ಲಿರುವುದನ್ನು ಗಮನಿಸಿದಾಗ ಈ ವ್ಯಕ್ತಿಯು ತನಗೆ ತಾನೇ ನಿರ್ಮಿಸಿಕೊಂಡಿರುವ ಪರಿಧಿಯಿಂದ ಹೊರಬರಲಾರದೆ ಸಂಕಷ್ಟಗಳಿಗೆ ಸಿಲುಕಿರುತ್ತಾನೆ, ಇದನ್ನು ಈತನ ಅಂತಃಸತ್ವವು {BIO-METRIC} 240 ಅಂಶಗಳಿಂದ ಕೂಡಿದ್ದರೂ ಅದು ಉಪಯೊಗವನ್ನು ಕೇವಲ ಶೇಕಡ 10ಷ್ಟನ್ನು ಉಪಯೋಗಿಸುತ್ತಿರುವುದು ಸಮರ್ಥಿಸುತ್ತದೆ.
3. ಪಂಚತತ್ವಗಳು, ಸಪ್ತಧಾತುಗಳು, ತನ್ಮಾತ್ರೆಗಳ ಗತಿಯನ್ನು ಗಮನಿಸಿದಾಗ ಇವುಗಳು ಒಂದಕ್ಕೊಂದು ಪೂರಕವಾಗಿದ್ದು ಸಹಕರಿಸುವ ಬದಲು ವಿರೋಧ ಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯಾದ ಕಾರಣ ಸೂಕ್ಷ್ಮ ಶರೀರದ ವಿಶೇಷ ಗುಣಗಳಲ್ಲಿ {SUBTLE CHARACTERISTICS} ವ್ಯತ್ಯಯ ಉಂಟಾಗಿ ಅವುಗಳು ಕ್ರಮಬದ್ಧವಾಗಿ ಕಾರ್ಯನಿರ್ವಹಿಸದಂತಾಗಿದೆ, ಇದರಿಂದಾಗಿ ಸ್ಥೂಲ ಶರೀರದ ಕಾರ್ಯಕ್ಷಮತೆಯು ತೊಡಕಿನಿಂದ ಕೂಡಿರುತ್ತದೆ.
4. ಕುಂಡಲಿನಿ ಯೋಗದ ಅನಾಹತ ಚಕ್ರವನ್ನುಳಿದು ಸಹಸ್ರಾರ, ಆಙ್ಞ, ವಿಶುದ್ಧ, ಮಣಿಪುರ, ಸ್ವಾಧಿಸ್ತಾನ ಮತ್ತು ಮೂಲಾಧಾರ ಚಕ್ರಗಳೆಲ್ಲವೂ ತಮಗೆ ನಿಗದಿತವಾದುದಕ್ಕಿಂತಲೂ ಹೆಚ್ಚಿನ ಕೆಲಸ {OVER ACTIVE} ಮಾಡುತ್ತಿವೆ. ಇಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಮಾನವನ ಶರೀರದ ಮುಂಡ ಭಾಗದ ಮಧ್ಯದಲ್ಲಿರುವ “ವಪೆ”ಯ {DIAPHRAGM} ಮೇಲ್ಭಾಗದಲ್ಲಿರುವ ಸಹಸ್ರಾರ, ಆಙ್ಞ, ವಿಶುದ್ಧಗಳನ್ನು “ಮೇಜ಼ರ್ ಚಕ್ರಗಳು” {MAJOR CHAKRAS} ಮತ್ತು “ವಪೆ”ಯ {DIAPHRAGM} ಕೆಳಭಾಗದಲ್ಲಿರುವ ಮಣಿಪುರ, ಸ್ವಾಧಿಸ್ತಾನ ಮತ್ತು ಮೂಲಾಧಾರ ಚಕ್ರಗಳನ್ನು “ಮೈನರ್ ಚಕ್ರಗಳು” {MINOR CHAKRAS} ಎಂದು ಕರೆಯಲಾಗುತ್ತದೆ. ಈ ಆರೂ ಚಕ್ರಗಳು ಅತಿ ಹೆಚ್ಚಿನ ಕೆಲಸ {OVER ACTIVE} ಮಾಡುತ್ತಿರುವುದನ್ನು ಗಮನಿಸಿದಾಗ ಇವುಗಳಲ್ಲಿ ಪರಸ್ಪರವಾಗಿ ಇರಬೇಕಾದ ಅನುಬಂಧವಿಲ್ಲದಿರುವುದನ್ನು {LACK OF CO-ORDINATION} ಎತ್ತಿ ತೋರಿಸುತ್ತಿದೆ. ಹೀಗಾಗಿ, ಈತನು ತನಗೆ ತಾನೇ ನಿರ್ಮಿಸಿಕೊಂಡ ಗೊಂದಲಗಳ ಗೂಡಾಗಿ ಶಾರೀರಕ ಮತ್ತು ಮಾನಸಿಕ ಸಮಸ್ಯೆಗಳಿಂದ ನರಳುತ್ತಿರುವುದಲ್ಲದೆ ತನ್ನ ವೃತ್ತಿ ಜೀವನದಲ್ಲಿ ಮುಂದೆ ಬರಲಾಗದೆ ತನ್ನ ಭವಿಷ್ಯ ಜೀವನವನ್ನು ಸಹ ಹಾಳು ಮಾಡಿಕೊಳ್ಳುತ್ತಿದ್ದಾನೆ.

ಚಿಕಿತ್ಸೆ ಮತ್ತು ಪರಿಣಾಮ :
ಮೇಲ್ಕಂಡ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸೂಕ್ತ ರಿತಿಯಲ್ಲಿ ಪರಿಪೂರ್ಣ ಚಿಕಿತ್ಸೆಯನ್ನು {HOLISTIC TREATMENT} ಆಯೋಜಿಸಿ ಜೀವನ ಶೈಲಿಯಲ್ಲಿ ಈತನಿಗಿದ್ದ ನ್ಯೂನತೆಗಳನ್ನು ಅರಿವಾಗುವಂತೆ ಅರ್ಥೈಸಿ ತೊರಿಸಿ ಸೂಕ್ತ ಸಲಹೆಯನ್ನು ಮತ್ತು ವಿವಿಧ ಸಂಯೋಜನೆಯಲ್ಲಿ ರತ್ನೌಷಧಗಳನ್ನು ಸೂಕ್ತ ಆಯುರ್ವೇದ ಔಷಧಗಳೊಂದಿಗೆ ಕೊಟ್ಟು ಚಿಕಿತ್ಸೆ ನಡೆಸಲಾಯಿತು. ಕೇವಲ 3 ತಿಂಗಳ ಚಿಕಿತ್ಸೆಯಲ್ಲಿಯೇ ಅವರಲ್ಲಿ ಅದ್ಭುತ ಬದಲಾವಣೆಗಳುಂಟಾಯಿತು. ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯವರು ಇವರಲ್ಲಿ ಅಡಗಿ ಕುಳಿತಿದ್ದ ಕಾರ್ಯಕ್ಷಮತೆಯನ್ನು {EFFICIENCY} ಗಮನಿಸಿ ಇವರಿಗೆ ಸೂಕ್ತ ಸಂಬಳ-ಸಾರಿಗೆ ಮುಂತಾದ ಎಲ್ಲ ಸವಲತ್ತುಗಳನ್ನು ಕೊಟ್ಟು ವಿದೇಷದಲ್ಲಿರುವ ಅವರದೇ ಆದ ಸಂಸ್ಥೆಗೆ ಒಂದು ವರ್ಷ ಕಾಲ ಸೇವೆ ಸಲ್ಲಿಸಲು ಕಳುಹಿಸಿದರು. ಅಲ್ಲಿ ಯಶಸ್ವಿಯಾಗಿ ಇವರು ಕಾರ್ಯನಿರ್ವಹಿಸಿ ಹಿಂದಿರುಗಿ ಬಂದ ನಂತರ ಇಲ್ಲಿ ಅವರು ಮೊದಲು ನಿರ್ವಹಿಸುತ್ತಿದ್ದ ಸ್ಥಾನಕ್ಕಿಂತಲೂ ಉನ್ನತ ಹುದ್ದೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2016ನೇ ಆಗಸ್ಟ್ ಮಾಸದಲ್ಲಿ ಅವರು ನನ್ನನ್ನು ಸಂಪರ್ಕಿಸಿ ಸುಮಾರು 8-10 ತಿಂಗಳ ಕಾಲ ಅವರು ಅನಿವಾರ್ಯಗಳಿಂದ ನಿಲ್ಲಿಸಿದ್ದ ಚಿಕಿತ್ಸೆಯನ್ನು ಮುಂದುವರೆಸಲು ವಿನಂತಿಸಿದರು. ಅದರಂತೆ ಈ ಹಿಂದಿನ ಚಿಕಿತ್ಸಾ ಕಾಲದಲ್ಲಿ ಮೂಡಿಬಂದಿದ್ದ ಎಲ್ಲ ಮಾಹಿತಿಗಳನ್ನು ಈಗ ಮತ್ತೊಮ್ಮೆ ಸುದೀರ್ಘವಾಗಿ “ಮೆಡಿಕಲ್ ಡೌಸಿಂಗ್” ಮತ್ತು “ಕಿರ್ಲಿಯನ್” ವಿಧಾನದ ಮುಖಾಂತರ ಪರಿಶೀಲಿಸಿದಾಗ ಅವರ ಮೂಲಸಮಸ್ಯೆಗಳಲ್ಲಿ ಅರ್ಧದಷ್ಟು ಇಲ್ಲವಾಗಿದೆ, ಪರಿಪೂರ್ಣ ಆರೋಗ್ಯದತ್ತ ಸಾಗುತ್ತಿದ್ದಾರೆ. ಚಿಕಿತ್ಸೆ ಮುಂದುವರೆಯುತ್ತಿದೆ.
ಕಿರ್ಲಿಯನ್ ವಿಧಾನವೆಂದರೆ ರಷ್ಯಾ ದೇಶದಲ್ಲಿ ಅಭಿವೃದ್ಧಿ ಪಡಿಸಿದ, ಕುಂಡಲಿನಿ ಯೋಗ ಚಕ್ರಗಳು, ಪ್ರಭೆ {ಆರಾ/AURA} ಮತ್ತು ಸೂಕ್ಷ್ಮ ಶರೀರದಲ್ಲಿ ಅಡಗಿ ಕುಳಿತಿರುವ ಸಮಸ್ಯೆಗಳನ್ನು ಎತ್ತಿ ತೋರಿಸುವ ಒಂದು ಕ್ಯಾಮರಾ. ಇದು ನಾವು ಮಾಡುವ “ಮೆಡಿಕಲ್ ಡೌಸಿಂಗ್”ಗೆ ಪೂರಕವಾಗಿ ಜಟಿಲ ಸಮಸ್ಯೆಗಳನ್ನು ನಿಖರವಾಗಿ ಅರಿತುಕೊಂಡು ರೋಗ ನಿದಾನ ಮಾಡಲು ಸಾಧ್ಯವಾಗುತ್ತದೆ. (ಈ ಕ್ಯಾಮರಾವನ್ನು ನಾವು ಆಮದು ಮಾಡಿಕೊಂಡಿದ್ದೇವೆ.)