ಇಪ್ಪತ್ತಮೂರನೆಯ ಸಂಚಿಕೆ

ನನ್ನ ಮಾತು :
ಈ ಸಂಚಿಕೆಯಲ್ಲಿ ವಿವಾಹಿತ ಪುರುಷರೊಬ್ಬರ ಅಪಸ್ಮಾರ {EPILEPSY} ರೋಗದ ಬಗ್ಗೆ ಬರೆಯುತ್ತಿದ್ದೇನೆ. ವೈಶಿಷ್ಟ್ಯವೇನೆಂದರೆ ಈತನು ಹದಿ-ಹರಿಯಕ್ಕೆ ಬರುವ ಹೊತ್ತಿಗೆ ಲೈಂಗಿಕ ವಿಚಾರಗಳಲ್ಲಿ ಆಸಕ್ತನಾಗಿ ತನ್ನ ವಿದ್ಯೆಯ ಕಡೆಗೆ ಗಮನ ಕೊಡಲಾರದೆ ಹೇಳಿಕೊಳ್ಳುವ ಮಟ್ಟಕ್ಕೆ ತಲುಪಲಿಲ್ಲ (ಈ ಅಂಶವನ್ನು ಡೌಸಿಂಗ್ ಮುಖಾಂತರ ತಿಳಿದುಕೊಳ್ಳಲಾಗಿದೆ). ತದನಂತರ ವಯೋಮಾನಕ್ಕೆ ಅನುಸಾರವಾಗಿ ವಿವಾಹಿತನಾಗಿ ಒಬ್ಬ ಪುತ್ರನನ್ನು ಪಡೆದರೂ ಲೈಂಗಿಕ ವಿಚಾರದಲ್ಲಿ ಸರಿಯಾದ ಅರಿವಿಲ್ಲದೆ ವಿರುದ್ಧ ಗತಿಯಲ್ಲಿ {NEGATIVE} ಚಿಂತಿಸುತ್ತಿರುತ್ತಾನಾದ ಕಾರಣ ಅದು ಈತನನ್ನು ಅಪತಂತ್ರಕ/ಅಪಸ್ಮಾರ {EPILEPSY} ರೋಗಿಯನ್ನಾಗಿ ಮಾಡಿದೆ. ಓದಿ, ಅರ್ಥೈಸಿ, ಬರೆಯಿರಿ.

ವೃತ್ತಿ ಧರ್ಮದಂತೆ ಇಲ್ಲಿ ವಿವರಿಸಿರುವ ರೋಗಿಗಳ ಪರಿಚಯವನ್ನು ಕೊಡಲಾಗುವುದಿಲ್ಲ.

ರೋಗಿ :
ಮೂವತ್ತೊಂದು ವರ್ಷ ವಯೋಮಾನದ ಪುರುಷ, ವಿವಾಹಿತ, ಒಂದು ಮಗುವಿನ ತಂದೆ.

ಬಾಹ್ಯ ಲಕ್ಷಣಗಳು :
ಅಜೀರ್ಣ, ತಲೆನೋವು, ಸ್ಥೂಲ ಶರೀರಿ, ಜೀವನದಲ್ಲಿ ನಿರಾಸಕ್ತಿ, ಮರೆವು, ಆಗಿಂದಾಗ್ಗೆ ಅಪತಂತ್ರಿಕ ಉಂಟಾಗುವುದು.

ರೋಗ ನಿದಾನ ಮೆಡಿಕಲ್ ಡೌಸಿಂಗ್‍ನಿಂದ ಹೊರಬಂದ ಅಂಶಗಳು :
1. ರೋಗದ ಮೂಲಸ್ಥಾನವು ಗಂಟಲು {THROAT} ಮತ್ತು ಕೋಷ್ಠ {STOMACH}.
2. ಪಂಚತತ್ವಗಳಲ್ಲಿ ಜಲ, ಪೃಥ್ವಿ, ವಾಯುಗಳು; ಸಪ್ತಧಾತುಗಳಲ್ಲಿ ರಕ್ತ ಮತ್ತು ಮಾಂಸಗಳು; ತನ್ಮಾತ್ರೆಗಳಲ್ಲಿ ರಸ ಮತ್ತು ಗಂಧಗಳು; ತ್ರಿಗುಣಗಳಾದ ಸತ್ವ, ರಜೋ ಮತ್ತು ತಮೋ ಗುಣಗಳೆಲ್ಲವೂ ದುಷ್ಟಗೊಂಡಿವೆ. ಅಂತೆಯೇ ತ್ರಿದೋಷಗಳಾದ ವಾತ-ಪಿತ್ತ-ಕಫಗಳೂ ಸಮಸ್ಯೆಯಿಂದ ಕೂಡಿವೆ.
3. ರೋಗವು ಭಾವನಾತ್ಮಕ {EMOTIONAL/ASTRAL} ಮತ್ತು ಶಾರೀರಕ {PHYSICAL} ಸ್ತರಗಳಲ್ಲಿದೆ.
4. ಸೂಕ್ಷ್ಮ ಶರೀರದ ವಿಶೇಷ ಗುಣಗಳಲ್ಲಿ {SUBTLE CHARACTERISTICS} ಮಾನಸಿಕ {MENTAL}, ಚೈತನ್ಯ {VITAL} ಮತ್ತು ಙ್ಞಾನವಾಹಿನಿಗಳಲ್ಲಿ {SENSORIUM} ವ್ಯತ್ಯಯಗೊಂಡಿವೆ.
5. ಅಂತೆಯೇ, ಸ್ಥೂಲ ಶರೀರದ {PHYSICAL CHARACTERISTICS} 72,000 ನರಮಂಡಲದಲ್ಲಿಯೂ ನ್ಯೂನತೆ – ಇದರ ಪ್ರಮಾಣ ಶೇಕಡ 50ಕ್ಕೂ ಹೆಚ್ಚಿದೆ
6. ಮಾನಸಿಕ {PSYCHOLOGICAL FACTOR} ನ್ಯೂನತೆಯನ್ನು ಗಮನಿಸಿದಾಗ ಅದು ತನ್ನ ಆರೋಗ್ಯ {HEALTH}, ಭವಿಷ್ಯ ಜೀವನದ {FUTURE LIFE} ಬಗ್ಗೆ ಮತ್ತು ಲೈಂಗಿಕ ಜೀವನದಲ್ಲಿ {SEXUAL LIFE} ಹೆಚ್ಚಿನ ಆಸಕ್ತಿ ಹೊಂದಿರುತ್ತಾನೆ.
7. ಕುಂಡಲಿನಿ ಯೋಗಚಕ್ರಗಳಾದ ಸಹಸ್ರಾರ, ಆಙ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾದಿಸ್ತಾನ ಮತ್ತು ಮೂಲಾಧಾರಗಳೆಲ್ಲವೂ ಅತಿ ಹೆಚ್ಚು ಕೆಲಸ ಮಾಡುತ್ತಿವೆ {OVER ACTIVE}.
8. ಕಿರ್ಲಿಯನ್ ಕ್ಯಾಮರಾದಿಂದ ಸೂಕ್ಷ್ಮ ಶರೀರದ ಚಿತ್ರಗಳು ಸ್ಪಷ್ಟವಾಗಿ ನ್ಯೂನತೆಗಳನ್ನು ತೋರಿಸುತ್ತಿವೆ.

ವಿಶ್ಲೇಷಣೆ :
1. ಈತನ ರೋಗದ ಮೂಲಸ್ಥಾನವು ಗಂಟಲು {THROAT} ಮತ್ತು ಕೋಷ್ಠ {STOMACH} ಆಗಿರುವುದನ್ನು ಗಮನಿಸಿದಾಗ ವಿಶುದ್ಧ ಚಕ್ರದೊಂದಿಗೆ ಗಂಟಲು ಸಂಬಂಧ ಹೊಂದಿದ್ದು ಇದು ಥೈರಾಯ್ಡ್ ಗ್ರಂಥಿಯನ್ನು {THYROID GLAND} ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ಮತ್ತು ಸೂಕ್ತ ರೀತಿಯಲ್ಲಿ ಅರಿವನ್ನು ಕೊಡಬೇಕಾದುದು ಸೃಷ್ಟಿ ಕ್ರಿಯೆಯಲ್ಲಿ ತೊಡಗಬೇಕಾದುದು ಇದರ ಕಾರ್ಯವಾಗಿರುತ್ತದೆ. ಇದನ್ನು ಊರ್ಧ್ವ ಅರಿವಿನ ಕೇಂದ್ರ {HIGHER CREATIVE} ಎಂದು ಹೇಳಲಾಗುತ್ತದೆ. ಇದು ವಾಯು ತತ್ವದಲ್ಲಿದೆ. ವಿಶುದ್ಧ ಚಕ್ರದೊಂದಿಗೆ ಸೃಷ್ಟಿ ಕ್ರಿಯೆಯಲ್ಲಿ ಸಹಕರಿಸಬೇಕಾದ ಇದರ ಅನುಬಂಧಿ ಸ್ವಾದಿಸ್ಥಾನ ಚಕ್ರವು ಅಧೋ ಅರಿವಿನ ಕೇಂದ್ರವಾಗಿದ್ದು {LOWER CREATIVE CENTRE} ಗೊನಾಡ್ಸ್ ಗ್ರಂಥಿಯು {GONADS GLAND} ಕ್ರಮಬದ್ಧವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಇದರ ಕಾರ್ಯವಾಗಿರುತ್ತದೆ. ಇದು ಜಲ ತತ್ವದಲ್ಲಿದೆ. ಆದರೆ ಇವೆರಡೂ (ವಿಶುದ್ಧ ಮತ್ತು ಸ್ವಾದಿಸ್ತಾನ) ಅತಿ ಹೆಚ್ಚಿನ ಕೆಲಸ {OVER ACTIVE} ಮಾಡುವ ಮೂಲಕ ಪರಸ್ಪರ ಅನ್ಯೋನ್ಯತೆಯಿಂದ ಕೆಲಸ ಮಾಡದೆ ಸಮಸ್ಯೆಗಳನ್ನುಂಟು ಮಾಡುತ್ತಿವೆ. ಇನ್ನು ಕೋಷ್ಠವನ್ನು ಗಮನಿಸಿದಾಗ ವಿರುದ್ಧ ಚಿಂತನೆಗಳನ್ನು {NEGATIVE THOUGHTS} ಮಾಡುತ್ತ ಕೋಷ್ಠವನ್ನು ಅಡಗಿಸಿಡುವ ಉಗ್ರಾಣವನ್ನಾಗಿ {STORE HOUSE} ಮಾಡಿಕೊಂಡು ತನ್ಮೂಲಕ ಮಣಿಪುರ ಚಕ್ರದಲ್ಲಿ ನ್ಯೂನತೆಯನ್ನುಂಟು ಮಾಡಿ ಪಾಂಕ್ರಿಯಾಸ್ ಗ್ರಂಥಿಯ {PANCREAS GLAND} ಕಾರ್ಯಕ್ಷಮತೆ ಕುಗ್ಗುವಂತೆ ಮಾಡಿರುತ್ತಾನೆ.
2. ಈತನ ರೋಗವು ಪಂಚತತ್ವಗಳಲ್ಲಿ ಜಲತತ್ವದಿಂದ ರಕ್ತ ಧಾತುವು, ಭೂತತ್ವದಿಂದ ಮಾಂಸಧಾತುವು, ವಾಯುತತ್ವದಿಂದಾಗಿ ನರಮಂಡಲವು ದೂಷಿತವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರಿಂದಾಗಿಯೇ, ಈತನು ಸ್ಥೂಲ ಶರೀರಿಯಾಗಿರುವುದು, ಜೀರ್ಣ ಕ್ರಿಯೆಯಲ್ಲಿ ಸಮಸ್ಯೆಯುಂಟಾಗಿ ನಾನಾ ರೀತಿಯಲ್ಲಿ ಪ್ರಕಟಗೊಳ್ಳುತ್ತಿದೆ. ಇದಕ್ಕೆ ದುಷ್ಟವಾಗಿರುವ ಮತ್ತು ತ್ರಿದೋಷಗಳು, ತ್ರಿಗುಣಗಳು ಒತ್ತು ಕೊಡುತ್ತಿವೆ; ಒಟ್ಟಿನಲ್ಲಿ ಸಮಸ್ಯೆಗಳ ಗೂಡಾಗಿರುತ್ತಾನೆ.
3. ರೋಗವು ಭಾವನಾತ್ಮಕ {EMOTIONAL/ASTRAL} ಮತ್ತು ಶಾರೀರಕ {PHYSICAL} ಸ್ತರಗಳಲ್ಲಿರುವುದನ್ನು ಗಮನಿಸಿದಾಗ ಈತನು ತನ್ನ ಭಾವನೆಗಳೇ ಸರಿ, ಕುಟುಂಬದವರು ಮತ್ತು ಈತನ ಸಂಪರ್ಕಕ್ಕೆ ಬರುವವರು ತನ್ನ ಭಾವನೆಗಳಿಗೆ ಮಾತ್ರ ಇಂಬು ಕೊಡಬೇಕೆಂಬ ವಿರುದ್ಧ ಚಿಂತನೆಯಲ್ಲಿರುತ್ತಾನೆ {NEGATIVE THOUGHTS}. ನಾನಾ ಕಾರಣಗಳಿಂದ ಇದು ಸಾಧ್ಯವಾಗದಿದ್ದಾಗ ಅದು ಈತನ ಭೌತಿಕ {PHYSICAL} ಶರೀರದ ಮೇಲೆ ತನ್ನ ದುಷ್ಟ ಪ್ರಭಾವ ಬೀರುವ ಕಾರಣ ಅಪಸ್ಮಾರ/ಅಪತಂತ್ರಕ {EPILEPSY} ಕಾಣಿಸಿಕೊಳ್ಳುತ್ತದೆ.
4. ಸೂಕ್ಷ್ಮ ಶರೀರದ ವಿಶೇಷ ಗುಣಗಳನ್ನು {SUBTLE CHARACTERISTICS} ಗಮನಿಸಿದಾಗ ಮಾನಸಿಕ {MENTAL}, ಚೈತನ್ಯ {VITAL} ಮತ್ತು ಙ್ಞಾನವಾಹಿನಿಗಳಲ್ಲಿ {SENSORIUM} ಕಾರ್ಯದಲ್ಲಿ ವೈಫಲ್ಯತೆ ಕಂಡುಬರುತ್ತಿದೆ. ಇವುಗಳಿಗೆ ಪ್ರಧಾನ ಕಾರಣವೆಂದರೆ ವಾಯುತತ್ವವು ದುಷ್ಟಗೊಂಡಿರುವುದೇ ಆಗಿದೆ. ಅಂತೆಯೇ, ಸ್ಥೂಲ ಶರೀರದ ವಿಶೇಷ ಗುಣಗಳನ್ನು {PHYSICAL CHARACTERISTICS} ಗಮನಿಸಿದಾಗ ನಮ್ಮಲ್ಲಿರುವ 72,000 ನರಮಂಡಲದ ಕಾರ್ಯಕ್ಷಮತೆ ಕುಂಠಿತಗೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
5. ಇನ್ನು ಮಾನಸಿಕ {PSYCHOLOGICAL FACTOR} ಸಮಸ್ಯೆಯನ್ನು ಗಮನಿಸಿದರೆ ಅದು ತನ್ನ ಆರೋಗ್ಯ {HEALTH}, ಭವಿಷ್ಯದಲ್ಲಿ ಉತ್ತಮ ಜೀವನದ {FUTURE LIFE} ಮತ್ತು ಸಂತೃಪ್ತಿಕರ ಲೈಂಗಿಕತೆಯ ಕಡೆಗೆ {SEXUAL LIFE} ಹೋಗುತ್ತಿದೆ. ಇದಕ್ಕಾಗಿ ಅಹರ್ನಿಶಿ ಯೋಚನೆಯಿಂದಾಗಿ ನರಮಂಡಲದ ಮೇಲೆ ಅನವಶ್ಯಕ ಒತ್ತಡ ಬೀರುತ್ತಿದೆ.
6. ಇನ್ನು ಕುಂಡಲಿನಿ ಯೋಗಚಕ್ರದ ಗತಿಯನ್ನು ಗಮನಿಸಿದಾಗ ಸಹಸ್ರಾರ, ಆಙ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾದಿಸ್ತಾನ ಮತ್ತು ಮೂಲಾಧಾರಗಳೆಲ್ಲವೂ ಅತಿ ಹೆಚ್ಚು ಕೆಲಸ ಮಾಡುವ ಮೂಲಕ {OVER ACTIVE} ದೂಷಿತಗೊಂಡಿವೆ. ಇದರಲ್ಲಿ ಆಙ್ಞ ಚಕ್ರದ ಬಗ್ಗೆ ವಿಶ್ಲೇಷಿಸಿದಾಗ ಇದು ಪಿಟ್ಯುಟರಿ ಗ್ರಂಥಿಯೊಂದಿಗೆ ಸಂಬಂಧ ಹೊಂದಿದೆ (ಆಧುನಿಕ ವೈದ್ಯರು ಇದನ್ನು “ಮಾಸ್ಟರ್ ಗ್ಲಾಂಡ್” ಎನ್ನುತ್ತಾರೆ). ನಮ್ಮಲ್ಲಿರುವ 72,000 ನರಮಂಡಲದ ಕಾರ್ಯಕ್ಷಮತೆಯನ್ನು ನೋಡಿಕೊಳ್ಳಬೇಕಾದುದು, ಇದೇ ದುಷ್ಟವಾದಾಗ ಉಳಿದ ಗ್ರಂಥಿಗಳಾದ ಪೀನಿಯಲ್, ಥೈರಾಯ್ಡ್, ಥೈಮಸ್, ಪಾಂಕ್ರಿಯಾಸ್, ಗೊನಾಡ್ಸ್ ಮತ್ತು ಅಡ್ರೆನಲ್‍ಗಳನ್ನು ಸರಿಯಾದ ರೀತಿಯಲ್ಲಿ ಪ್ರಚೋದಿಸಿ ಹೇಗೆ ಕಾರ್ಯತತ್ಪರರನ್ನಾಗಿ ಮಾಡಬಲ್ಲದು? ಅಂತೆಯೇ, ಈ ಚಕ್ರಗಳ ಅನುಬಂಧಿಯಾದ ಕಿರಣಗಳು {RAYS} 1-7 ಇವು ಸಹ ತಮ್ಮ ಮನಬಂದಂತೆ ಪ್ರವಹಿಸುತ್ತ ಸಮಸ್ಯೆಗಳಿಗೆ ಇಂಬು ಕೊಡುತ್ತಿವೆ.

ಚಿಕಿತ್ಸೆ ಮತ್ತು ಪರಿಣಾಮ :
ಈಗಾಗಲೇ ಅವಲೋಕಿಸಿರುವ ಡೌಸಿಂಗ್‍ನಿಂದ ದೊರೆತ ಮಾಹಿತಿ, ಕಿರ್ಲಿಯನ್ ಕ್ಯಾಮರಾದಿಂದ ತೆಗೆದ ಸೂಕ್ಷ್ಮ ಶರೀರದಲ್ಲಿರುವ ನ್ಯೂನತೆಯ ಚಿತ್ರಗಳು, ರೋಗಿ ಮತ್ತು ಆತನ ಕುಟುಂಬದವರೊಂದಿಗೆ ನಡೆಸಿದ ಆಪ್ತ ಸಮಾಲೋಚನೆಗಳನ್ನು ಕೂಲಂಕಶವಾಗಿ ವಿಮರ್ಷಿಸಿ ಸೂಕ್ತ ರೀತಿಯಲ್ಲಿ ದಿವ್ಯ ರತ್ನೌಷಧಗಳೊಂದಿಗೆ ಆಯುರ್ವೇದ ಔಷಧಗಳನ್ನು ಸಂಯೋಜಿಸಿ ಪರಿಪೂರ್ಣ {HOLISTIC} ಚಿಕಿತ್ಸೆ ನಡೆಸಲಾಗುತ್ತಿದೆ, ಚಿಕಿತ್ಸೆಗೆ ರೋಗಿಯು ಉತ್ತೇಜನಕಾರಿಯಾಗಿ ಸ್ಪಂದಿಸುತ್ತಿದ್ದಾನೆ. ಚಿಕಿತ್ಸೆ ಮುಂದುವರೆದಿದೆ.

IMAGES OF AURA AND CHAKRAS BY KIRLIAN CAMERA

MALEFIED AURA = ದೂಷಿತ ಪ್ರಭೆ {ಆರಾ}

2017-01-07 14_14 - H.L.Raghavendra (energy field)

MALEFIED CHAKRAS = ದೂಷಿತ ಚಕ್ರಗಳು

2017-01-07 14_14 - H.L.Raghavendra (chakras)